"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincyಗೆ ಗುಡ್‌ಬೈ ಹೇಳಿದ Harmanpreet Kaur..!

ಇದು ಸುಲಭವಾದ ನಿರ್ಧಾರವಲ್ಲ. ಹಲವು ವರ್ಷಗಳ ನೆನಪುಗಳು, ಭಾವನೆಗಳು, ತ್ಯಾಗಗಳು ಮತ್ತು ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುವ ಹಲವು ಕ್ಷಣಗಳನ್ನು ಒಳಗೊಂಡಿರುವ ನಿರ್ಧಾರ ಇದು. ಈಗ ನಾನು ಮತ್ತೆ ಆಟವನ್ನು ಪ್ರೀತಿಯಿಂದ ಆಡುವುದಕ್ಕೆ ಸಿದ್ಧಳಾಗಿದ್ದೇನೆ.
Harmanpreet Kaur
ಹರ್ಮನ್‌ಪ್ರೀತ್ ಕೌರ್
Updated on: 

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ದೀರ್ಘಕಾಲದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಂಗಳವಾರ ಮೂರು ಮಾದರಿಯ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ನಾಯಕಿಯಾಗಿ ತಾನು ಮಾಡಬೇಕಾದ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಇದೀಗ ಮತ್ತೆ ಆಟವನ್ನು ಪ್ರೀತಿಯಿಂದ ಆಡುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ಭಾರತ ಮಹಿಳಾ ತಂಡದ ಪ್ರದರ್ಶನ ಮತ್ತು ಮುಂದಿನ ಹಾದಿಯನ್ನು ಪರಿಶೀಲಿಸಲು ಗುವಾಹಟಿಯಲ್ಲಿ ಬಿಸಿಸಿಐ ನಡೆಸಿದ ಸಭೆಯ ಬಳಿಕ ಹರ್ಮನ್‌ಪ್ರೀತ್ ಈ ನಿರ್ಧಾರ ಪ್ರಕಟಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹರ್ಮನ್‌ಪ್ರೀತ್ ಅವರು, ಇಂದು ನಾನು ಭಾರತ ಮಹಿಳಾ ಕ್ರಿಕೆಟ್ ತಂಡದ ಮೂರು ಮಾದರಿಗಳ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದು ಸುಲಭವಾದ ನಿರ್ಧಾರವಲ್ಲ. ಹಲವು ವರ್ಷಗಳ ನೆನಪುಗಳು, ಭಾವನೆಗಳು, ತ್ಯಾಗಗಳು ಮತ್ತು ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುವ ಹಲವು ಕ್ಷಣಗಳನ್ನು ಒಳಗೊಂಡಿರುವ ನಿರ್ಧಾರ ಇದು. ಈಗ ನಾನು ಮತ್ತೆ ಆಟವನ್ನು ಪ್ರೀತಿಯಿಂದ ಆಡುವುದಕ್ಕೆ ಸಿದ್ಧಳಾಗಿದ್ದೇನೆ. ನಾಯಕತ್ವ ಅಂತ್ಯಗೊಳ್ಳುತ್ತದೆ, ಆದರೆ, ಆಟಗಾರ್ತಿಯಾಗಿರುವ ಪಯಣ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

Harmanpreet Kaur
'ಟ್ರೋಫಿ ಕಳ್ಳ': Asia Cup Trophy ಫೈನಲ್ ಪಂದ್ಯ ಬಳಿಕ ಅಭಿಮಾನಿಗಳಿಂದ ಘೋಷಣೆ; ತಿರುಗಿಯೂ ನೋಡದೇ ಓಟಕಿತ್ತ Mohsin Naqvi

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹರ್ಮನ್‌ಪ್ರೀತ್, ಉಪನಾಯಕಿ ಸ್ಮೃತಿ ಮಂಧಾನಾ ಹಾಗೂ ಮುಖ್ಯ ಕೋಚ್ ಅಮೋಲ್ ಮುಜುಮ್ದಾರ್ ಭಾಗವಹಿಸಿದ್ದರು.

37 ವರ್ಷದ ಹರ್ಮನ್‌ಪ್ರೀತ್ 2016ರಲ್ಲಿ ಭಾರತ ಮಹಿಳಾ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದರು. 2022ರಲ್ಲಿ ಏಕದಿನ ತಂಡದ ನಾಯಕಿಯಾಗಿ ನೇಮಕಗೊಂಡ ಅವರು, 2023ರಲ್ಲಿ ಮೂರು ಮಾದರಿಯ ತಂಡಗಳ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಕಳೆದ ನವೆಂಬರ್‌ನಲ್ಲಿ ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. ಇತ್ತೀಚೆಗೆ ಟಿ20 ಮಾದರಿಯಲ್ಲಿ ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನೂ ಭಾರತ ತಂಡ ಗೆದ್ದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com