ಕ್ರಿಕೆಟ್ ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿದ ಭಾರತೀಯ ಮಹಿಳಾ ಬ್ಯಾಟರ್: ಭಾವನಾತ್ಮಕ ಪೋಸ್ಟ್!

2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೇಘನಾ, ಭಾರತದ ಪರ ಒಟ್ಟು 20 ಏಕದಿನ (ODI) ಮತ್ತು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.
Sabbhineni Meghana
ಸಬ್ಬಿನೇನಿ ಮೇಘನಾ
Updated on: 

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ಸಬ್ಬಿನೇನಿ ಮೇಘನಾ, ಕ್ರಿಕೆಟ್‌ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ಆರಂಭಿಕ ಬ್ಯಾಟರ್ ಆಗಿದ್ದ 30 ವರ್ಷದ ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ, ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೇಘನಾ, ಭಾರತದ ಪರ ಒಟ್ಟು 20 ಏಕದಿನ (ODI) ಮತ್ತು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ನಿಯಮಿತ ಅವಕಾಶಗಳು ಸಿಗದಿದ್ದರೂ, ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.

2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ಮಹಿಳಾ ತಂಡದ ಭಾಗವಾಗಿದ್ದ ಮೇಘನಾ, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸಿದ್ದರು ಮತ್ತು 2024ರಲ್ಲಿ ಆ ತಂಡವು ಪ್ರಶಸ್ತಿ ಗೆದ್ದಾಗ ಅದರ ಭಾಗವಾಗಿದ್ದರು.

ಮೇಘನಾ ಭಾವನಾತ್ಮಕ ಪೋಸ್ಟ್ ಹೀಗಿದೆ: ವಿಶ್ವ ವೇದಿಕೆಯಲ್ಲಿ ಜೆರ್ಸಿ ಧರಿಸಿ, ಕೈಯಲ್ಲಿ ಬ್ಯಾಟ್ ಹಿಡಿದು ಮೊದಲ ಬಾರಿಗೆ ಮೈದಾನಕ್ಕಿಳಿದಿದ್ದು, ಕನಸು ನನಸಾದಂತೆಯೇ ಇತ್ತು. ಆಟಗಾರ್ತಿಯಾಗಿ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸುತ್ತಿರುವ ಈ ಸಂದರ್ಭದಲ್ಲಿ, ನನ್ನ ಹೃದಯವು ಕೃತಜ್ಞತೆಯ ಭಾವನೆಯಿಂದ ತುಂಬಿಹೋಗಿದೆ. ಮೈದಾನವೇ ನನ್ನ ಎರಡನೇ ಮನೆಯಾಗಿತ್ತು. ಇದು ನನಗೆ ದೃಢತೆ ಮತ್ತು ವಿನಮ್ರತೆಯನ್ನು ಕಲಿಸಿಕೊಟ್ಟಿತು. ಜೊತೆಗೆ, ಜೀವನಪೂರ್ತಿ ನನ್ನೊಂದಿಗೆ ಉಳಿಯುವಂತಹ ನೆನಪುಗಳನ್ನು ಮತ್ತು ಸ್ನೇಹವನ್ನು ನನಗೆ ನೀಡಿದೆ ಎಂದು ಅವರು ಬರೆದುಕೊಂಡಿದ್ದಾರೆ.

Sabbhineni Meghana
ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ BCCI ಆಸ್ತಿ ಎಷ್ಟು ಕೋಟಿ? ಆಸ್ಟ್ರೇಲಿಯಾ, ಪಾಕ್ ಬೋರ್ಡ್ ಗಳ ಸಂಪತ್ತಿಗಿಂತ 11 ಪಟ್ಟು ಹೆಚ್ಚಳ!

"ನನ್ನ ವೃತ್ತಿಜೀವನದ ಉದ್ದಕ್ಕೂ ನಿರಂತರ ಬೆಂಬಲ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ ಬಿಸಿಸಿಐ (BCCI), ಆಂಧ್ರ ಕ್ರಿಕೆಟ್ ಅಸೋಸಿಯೇಷನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಜೈಂಟ್ಸ್ ಮತ್ತು ಆರ್‌ಎಸ್‌ಪಿಬಿ (RSPB) ಸಂಸ್ಥೆಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆಟದ ದಿನಗಳು ಮುಕ್ತಾಯಗೊಳ್ಳುತ್ತಿದ್ದರೂ, ಕ್ರಿಕೆಟ್‌ನೊಂದಿಗಿನ ನನ್ನ ಬಾಂಧವ್ಯ ಎಂದಿಗೂ ಮುರಿಯುವುದಿಲ್ಲ. ನಾನು ಈ ಕ್ರೀಡೆಯೊಂದಿಗೆ ಸದಾ ಆಳವಾದ ಸಂಪರ್ಕವನ್ನು ಹೊಂದಿರುತ್ತೇನೆ. ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಮೂಲಕ ಮತ್ತು ನನಗೆ ಎಲ್ಲವನ್ನೂ ನೀಡಿದ ಈ ಕ್ರೀಡೆಗೆ ಮರಳಿ ಏನನ್ನಾದರೂ ಕೊಡುಗೆ ನೀಡುವ ಮೂಲಕ ನನ್ನ ಜೀವನವನ್ನು ಮುಡಿಪಾಗಿಡಲು ಉದ್ದೇಶಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com