ಮದುವೆ ಆಗದ್ದಿದ್ದರೂ ಅಭಿಷೇಕ್ ಶರ್ಮಾರ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ಆಚರಿಸಿದ ಯುವತಿ, Video!

ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಪೈಕಿ ಮಹಿಳಾ ಅಭಿಮಾನಿಯೊಬ್ಬಳು ಅಭಿಷೇಕ್‌ಗಾಗಿ ಕರ್ವಾ ಚೌತ್ ಆಚರಿಸಿದ್ದಾಳೆ.
Abhishek sharma
ಅಭಿಷೇಕ್ ಶರ್ಮಾ
Updated on: 

ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಪೈಕಿ ಮಹಿಳಾ ಅಭಿಮಾನಿಯೊಬ್ಬಳು ಅಭಿಷೇಕ್‌ಗಾಗಿ ಕರ್ವಾ ಚೌತ್ ಆಚರಿಸಿದ್ದಾಳೆ. ತನ್ನ ಮೊಬೈಲ್ ನಲ್ಲಿ ಅಭಿಷೇಕ್ ಫೋಟೋ ನೋಡಿದ ನಂತರ ಯುವತಿ ಅರ್ಘ್ಯ ಅರ್ಪಿಸುತ್ತಿರುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾಳೆಯ

ಇದಲ್ಲದೆ, ಯುವತಿ ಜರಡಿ ಮೂಲಕ ಅಭಿಷೇಕ್ ಅವರ ಮುಖವನ್ನು ನೋಡಿದ್ದು ಆಶೀರ್ವಾದ ಪಡೆಯಲು ಅವರ ಪಾದಗಳನ್ನು ಮುಟ್ಟಿದ್ದಾಳೆ. ಈಗ, ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಕರ್ವಾ ಚೌತ್ ಉಪವಾಸವನ್ನು ಆಚರಿಸಲಾಗುತ್ತದೆ. 2026ರ ಅಕ್ಟೋಬರ್ 29 ಉಪವಾಸವನ್ನು ಆಚರಿಸಲಾಯಿತು.

Abhishek sharma
'ಭುವಿ ಬೌಲಿಂಗ್ ಮಾಡಿರುವ ರೀತಿಯನ್ನು ನೋಡಿದರೆ, ಅವರನ್ನು ತಂಡದಿಂದ ಕೈಬಿಟ್ಟರೂ ಆಶ್ಚರ್ಯವೇನೂ ಆಗಲ್ಲ; ಆರ್ ಅಶ್ವಿನ್

ಕರ್ವಾ ಚೌತ್‌ನಲ್ಲಿ ಮಹಿಳೆಯರು ಉಪವಾಸ ಕೈಗೊಂಡು ಕರ್ವಾ ದೇವಿಯನ್ನು ಪೂಜಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಉಪವಾಸವನ್ನು ಆಚರಿಸುವುದರಿಂದ ಪತಿಯ ದೀರ್ಘಾಯುಷ್ಯ ಮತ್ತು ಸಂತೋಷದ ದಾಂಪತ್ಯ ಜೀವನಕ್ಕೆ ಆಶೀರ್ವಾದ ದೊರೆಯುತ್ತದೆ.

ಅಭಿಷೇಕ್ ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತೀಯ ಟಿ20 ತಂಡದ ಭಾಗವಾಗಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಈಗಾಗಲೇ ಸರಣಿಯನ್ನು 3-0 ಅಂತರದಿಂದ ಗೆದ್ದಿದೆ. ಸರಣಿಯ ಮೂರನೇ ಟಿ20ಯಲ್ಲಿ ಅಭಿಷೇಕ್ 35 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಈ ಪಂದ್ಯದಲ್ಲಿ 38 ಎಸೆತಗಳಲ್ಲಿ 11 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳನ್ನು ಒಳಗೊಂಡಂತೆ 113 ರನ್‌ಗಳ ಇನ್ನಿಂಗ್ಸ್ ಆಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com