U19 Asia Cup ಭಾರತ ತಂಡ ಪ್ರಕಟ: ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ವಿರೇಂದ್ರ ಸೆಹ್ವಾಗ್ ಮಗ ಆರ್ಯವೀರ್‌ಗೆ ಸ್ಥಾನ!

ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರರಾದ ಅನ್ವಯ್ ಮತ್ತು ಆರ್ಯವೀರ್, ಇತ್ತೀಚೆಗೆ ಮುಕ್ತಾಯಗೊಂಡ ವಿನೂ ಮಂಕಡ್ ಟ್ರೋಫಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು.
Aaryavir Sehwag - Anvay Dravid
ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್Online Desk
Updated on: 

ನವದೆಹಲಿ: ನವೆಂಬರ್ 5 ರಿಂದ 14 ರವರೆಗೆ ಓಮನ್‌ನ ಮಸ್ಕಟ್‌ನಲ್ಲಿ ನಡೆಯಲಿರುವ ಎಸಿಸಿ (ACC) ಪುರುಷರ ಅಂಡರ್-19 ಏಷ್ಯಾ ಕಪ್‌ಗಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ, ಕರ್ನಾಟಕದ ಅನ್ವಯ್ ದ್ರಾವಿಡ್ ಮತ್ತು ದೆಹಲಿಯ ಆರ್ಯವೀರ್ ಸೆಹ್ವಾಗ್ ಅವರಿಗೆ ಸ್ಥಾನ ನೀಡಲಾಗಿದೆ.

ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರರಾದ ಅನ್ವಯ್ ಮತ್ತು ಆರ್ಯವೀರ್, ಇತ್ತೀಚೆಗೆ ಮುಕ್ತಾಯಗೊಂಡ ವಿನೂ ಮಂಕಡ್ ಟ್ರೋಫಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು.

ಈ ತಿಂಗಳ ಆರಂಭದಲ್ಲಿ ನಡೆದ 19 ವರ್ಷದೊಳಗಿನವರ (U19) ಪಂದ್ಯಾವಳಿಯಲ್ಲಿ, ಗುಜರಾತ್ ವಿರುದ್ಧ 300ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ, 17 ವರ್ಷದ ಅನ್ವಯ್ ಕೇವಲ 100 ಎಸೆತಗಳಲ್ಲಿ 151 ರನ್‌ಗಳ ಆಕ್ರಮಣಕಾರಿ ಇನಿಂಗ್ಸ್ ಆಡಿದರು.

ಅಲ್ಲದೆ, ಜುಲೈ ತಿಂಗಳಲ್ಲಿ ಹಂಬಂಟೋಟಾದಲ್ಲಿ ನಡೆದ ಯುವ ಏಕದಿನ ಪಂದ್ಯವೊಂದರಲ್ಲಿ (Youth ODI), ಶ್ರೀಲಂಕಾ ವಿರುದ್ಧ 67 ಎಸೆತಗಳಲ್ಲಿ 87 ರನ್ ಸಿಡಿಸುವ ಮೂಲಕ ಅನ್ವಯ್ ತಮ್ಮ ಭರವಸೆಯ ಆಟವನ್ನು ಪ್ರದರ್ಶಿಸಿದ್ದರು.

Aaryavir Sehwag - Anvay Dravid
'100 ಎಸೆತಗಳಲ್ಲಿ 151 ರನ್': ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಕರ್ನಾಟಕದ ಭರ್ಜರಿ ಗೆಲುವಿನ ರೂವಾರಿ!

19 ವರ್ಷದ ಆರ್ಯವೀರ್ ಕೂಡ ಮಂಕಡ್ ಟ್ರೋಫಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು; ವಿಜಯನಗರಂನಲ್ಲಿ ಚಂಡೀಗಢದ ವಿರುದ್ಧ ನಡೆದ ಪಂದ್ಯದಲ್ಲಿ ಅವರು 143 ಎಸೆತಗಳಲ್ಲಿ 173 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರು.

ಲಕ್ಷ್ಯ ರೈಚಂದಾನಿ ನೇತೃತ್ವದ ಭಾರತ ತಂಡವು, ಯುಎಇ, ನೇಪಾಳ ಮತ್ತು ಪಾಕಿಸ್ತಾನದೊಂದಿಗೆ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ'ಯಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.

ಭಾರತ U19 ತಂಡ

ಲಕ್ಷ್ಯ ರೈಚಂದಾನಿ (ನಾಯಕ), ಆರ್ಯವೀರ್ ಸೆಹ್ವಾಗ್, ವಿಕೆ ವಿನೀತ್, ಯಶಬರ್ಧನ್ ಸಿಂಗ್ ಚೌಹಾಣ್ (ಉಪನಾಯಕ), ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ರಜತ್ ಬಘೇಲ್ (ವಿಕೆಟ್ ಕೀಪರ್)], ವಿ. ಯಶ್ವೀರ್, ಆರ್ಯನ್ ಸಾವ್ಸಾನಿ, ಮೋಹಿತ್ ಉಲ್ವಾ, ಕಾವ್ಯಾ ಪಟೇಲ್, ಶವಿನ್ ವಿನೋದ್, ಇಶಾನ್ ಸೂದ್.

ಭಾರತದ ವೇಳಾಪಟ್ಟಿ

ಭಾರತ vs ನೇಪಾಳ, ನವೆಂಬರ್ 6, ಮಸ್ಕತ್.

ಭಾರತ vs ಪಾಕಿಸ್ತಾನ, ನವೆಂಬರ್ 8, ಮಸ್ಕತ್.

ಭಾರತ vs ಯುಎಇ, ನವೆಂಬರ್ 10, ಮಸ್ಕತ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X