

ದುಬೈ: ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳು ಮಹಿಳಾ ಏಷ್ಯಾ ಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಈ ಹೈ-ವೋಲ್ಟೇಜ್ ನಾಕೌಟ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 40 ರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.
ಭಾರತೀಯ ಮಹಿಳಾ ತಂಡವು ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 149 ರನ್ ಪೇರಿಸಿತ್ತು. 150 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 109 ರನ್ ಪೇರಿಸಲಷ್ಟೇ ಸಾಧ್ಯವಾಗಿದ್ದು 40 ರನ್ ಗಳಿಂದ ಸೋಲು ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರನ್ನು ಸುಲ್ತಾನಾ ಖಾತುನ್ ಕೇವಲ 2 ರನ್‌ಗಳಿಗೆ ಔಟ್ ಮಾಡಿದರು. ಇದಾದ ನಂತರ, ಕ್ರೀಸ್‌ಗೆ ಬಂದ ಪ್ರತಿಕಾ ರಾವಲ್ (20 ರನ್‌ಗಳು, 24 ಎಸೆತಗಳು) ಶೆಫಾಲಿಗೆ ಬೆಂಬಲ ನೀಡಿದರು. ಆದರೆ ರನ್ ದರವನ್ನು ಹೆಚ್ಚಿಸುವ ಸಂಪೂರ್ಣ ಜವಾಬ್ದಾರಿ ಶೆಫಾಲಿ ಅವರ ಹೆಗಲ ಮೇಲಿತ್ತು. ಶೆಫಾಲಿ ವರ್ಮಾ ಆರಂಭದಿಂದಲೇ ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಕೇವಲ 40 ಎಸೆತಗಳಲ್ಲಿ 64 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಪರಿಣಾಮ ಭಾರತ ಸ್ಫರ್ಧಾತ್ಮಕ ರನ್ ಕಲೆಹಾಕಿತು.