ದೇಶದಲ್ಲೇ ಮೊದಲ 'ಮೊಬೈಲ್ ಒನ್‌' ಸೇವೆಗೆ ಚಾಲನೆ

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಲೋಕಾರ್ಪಣೆ...
ರಾಜ್ಯಪಾಲ ವಿ.ಆರ್.ವಾಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ 'ಮೊಬೈಲ್ ಒನ್‌' ಸೇವೆಗೆ ಚಾಲನೆ
ರಾಜ್ಯಪಾಲ ವಿ.ಆರ್.ವಾಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ 'ಮೊಬೈಲ್ ಒನ್‌' ಸೇವೆಗೆ ಚಾಲನೆ

ಬೆಂಗಳೂರು: ಡಿಜಿಟಲ್ ಇಂಡಿಯಾ ಕನಸಿಗೆ ಭಾರತದ ಐಟಿ ರಾಜಧಾನಿ ಬೆಂಗಳೂರು ಮಾದರಿಯಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ 'ಕರ್ನಾಟಕ ಮೊಬೈಲ್ ಒನ್‌' ಸೇವೆಗೆ ರಾಷ್ಪ್ರಪತಿ ಪ್ರಣಬ್ ಮುಖರ್ಜಿ ಚಾಲನೆ ನೀಡಿದ್ದಾರೆ.

ದೆಹಲಿಯಲ್ಲಿ 'ಡಿಜಿಟಲ್ ಇಂಡಿಯಾ' ಘೋಷಣೆಯಾಗಿದೆ, ಆದರೆ ಬೆಂಗಳೂರನ್ನು ದೆಹಲಿ ಸೇರಿದಂತೆ ಇತರ ನಗರಗಳು ಅನುಸರಿಸಬೇಕು ಎಂಬ ಘೋಷಣೆಯಾಗಿದೆ, ಆದರೆ ಬೆಂಗಳೂರನ್ನು ದೆಹಲಿ ಸೇರಿದಂತೆ ಇತರ ನಗರಗಳು ಅನುಸರಿಸಬೇಕು ಎಂಬ ಘೋಷಣೆಯೊಂದಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಲೋಕಾರ್ಪಣೆಯಾಗಿದೆ.

ನಾಲ್ಕುವರೆ ಸಾವಿರಕ್ಕೂ ಅಧಿಕ ಸೇವೆಗಳನ್ನು ಹೊಂದಿರುವ ಮೊಬೈಲ್ ಓನ್ ಸೇವೆಯನ್ನು ರಾಜ್ಯಪಾಲ ವಿ.ಆರ್.ವಾಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಸಭಾಂಗಣದಲ್ಲಿ ಸೋಮವಾರ ರಾಷ್ಪ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು.

ಆಡಳಿತವು ಸುಲಲಿತವಾಗಿ ಸಾಗಲು ಕಾನೂನು ಪಾಲನೆ, ಸರ್ಕಾರದ ನಿರ್ಧಾರಗಳಲ್ಲಿ ಸಾರ್ವಜನಿಕರ ಪಾತ್ರ, ಜವಾಬ್ದಾರಿ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಅತಿ ಮುಖ್ಯವಾದದ್ದು, ಯಶಸ್ವಿ ಇ-ಆಡಳಿತದಿಂದ ಇದನ್ನು ಸಾಧಿಸಿಲು ಸಾಧ್ಯವಿದೆ.

ಇದರ ಜತೆಗೆ ಕೇಂದ್ರ ಸರ್ಕಾರವು ಸ್ವಚ್ಛತಾ ಆಂದೋಲನ, ಆದರ್ಶ ಗ್ರಾಮ ಯೋಜನೆ ಹಾಗೂ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಮೂಲಕ ದೇಶದ ಜನ ಹಾಗೂ ರಾಜ್ಯ ಸರ್ಕಾರಕ್ಕೆ ಹೊಸ ಅವಕಾಶಗಳನ್ನು ನೀಡಿದೆ ಎಂದು ರಾಷ್ಪ್ರಪತಿ ಹೇಳಿದರು.

ತಂತ್ರಜ್ಞಾನ ಲಾಭ ಪಡೆದು ಸಿದ್ದರಾಮಯ್ಯ ಅವರು ಜನಪರವಾದ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಇದುರ ಅವರ ಆಡಳಿತ ವೈಖರಿ ತೋರಿಸುತ್ತದೆ. ರಾಜ್ಯದಲ್ಲಿರುವ ಸಾಮಾರ್ಥ್ಯವನ್ನು ಉಪಯೋಗಿಸಿಕೊಂಡು ಕಾರ್ಯರೂಪಕ್ಕೆ ತರುವುದು ನಾಯಕತ್ವದ ಲಕ್ಷಣ, ಸರ್ಕಾರ ಹೇಳಿದ್ದನ್ನು ಮಾಡಿ ತೋರಿಸಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೊಗಳಿದರು.

ಜಗತ್ತಿನಲ್ಲಿ ಎರಡನೆ ಅತಿ ದೊಡ್ಡ ಐಟಿ ಹಬ್ ಎಂಬ ಖ್ಯಾತಿಯನ್ನು ಬೆಂಗಳೂರು ಹೊಂದಿದೆ. ಆದರೆ 2020ರಷ್ಟೊತ್ತಿಗೆ ಜಗತ್ತಿನ ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆ ಬೆಂಗಳೂರು ಪಾತ್ರವಾಗಲಿದೆ. ಇದರ ಪ್ರಯೋಜನ ಸಾಮಾನ್ಯ ಜನರಿಗೂ ದೊರಕಬೇಕು ಎಂಬ ಉದ್ದೇಶದಿಂದ 'ಕರ್ನಾಟಕ ಮೊಬೈಲ್ ಒನ್‌' ಸೇವೆ ಆರಂಭಿಸಿದ್ದೇವೆ.

ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ಜನರಿಗೂ ಸೇವೆ ಸಿಗುವ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸಲಾಗಿದ್ದು, ಇನ್ನು ಕೆಲ ಸೇವೆಗಳನ್ನು ಶೀಘ್ರದಲ್ಲಿಯೇ ಸೇರಿಸಲಾಗುವುದು. ಪಾಸ್‌ಪೋರ್ಟ್ ಅಪ್ಲಿಕೇಷನ್, ಆದಾಯ ತೆರಿಗೆ ಪಾವತಿ, ಪೊಲೀಸರಿಗೆ ದೂರು ಸೇರಿದಂತೆ ಕೆಲ ಮೂಲಭೂತ ಸೇವೆಗಳು ಶೀಘ್ರದಲ್ಲೇ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com