ರೌಡಿ ಶೀಟರ್ ರವಿ ಬರ್ಬರ ಹತ್ಯೆ

ರೌಡಿ ಶೀಟರ್ ಬರ್ಬರ ಕೊಲೆ(ಸಾಂದರ್ಭಿಕ ಚಿತ್ರ)
ರೌಡಿ ಶೀಟರ್ ಬರ್ಬರ ಕೊಲೆ(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ನಗರದ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕೊಲೆಗೀಡಾದ ರೌಡಿ ಶೀಟರ್‌ನನ್ನು 24 ವರ್ಷದ ರವಿ ಎಂದು ಗುರುತಿಸಲಾಗಿದ್ದು ಆತನ ಎದೆ ಹಾಗೂ ಬೆನ್ನೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಈತನ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕ್ರಿಮಿನಲ್ ದೂರುಗಳು ದಾಖಲಾಗಿವೆ.

ಅಲ್ಲದೆ ಈತನ ಬದ್ಧ ವೈರಿಯಾಗಿದ್ದ ಪಳನಿ ಹತ್ಯೆಯಲ್ಲಿ ಈತನ ಕೈವಾಡವಿದೆ ಎಂಬ ಕಾರಣದಿಂದ ಈತನನ್ನು ಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com