
ಬೆಂಗಳೂರು: ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಲ್ಲ, ಹಾಗಂತ ಕರೆದರೆ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ ಎಂದು ನಾಡೋಜ ಡಾ| ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಟಿಪ್ಪು ಒಬ್ಬ ಕ್ರೂರಿ, ಮತಾಂಧ. ಟಿಪ್ಪುವನ್ನ ಸ್ವಾತಂತ್ರ್ಯ ಯೋಧನಂತೆ ಬಿಂಬಿಸಿ ಉತ್ಸವಗಳನ್ನು ನಡೆಸುವುದು ಸರಿಯಲ್ಲ ಎಂದಿದ್ದಾರೆ.
ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಹಿಂದೂ ದೇವಾಲಯಗಳನ್ನು ನಾಶಪಡಿಸಿರುವ ಉಲ್ಲೇಖಗಳು ಇವೆ. ಆದ್ರೆ ಟಿಪ್ಪುವಿನ ಬಗ್ಗೆ ಈ ರೀತಿ ವೈಭವೀಕರಿಸುವುದು ಸರಿಯಲ್ಲ ಎಂದಿದ್ದಾರೆ.
ಸರಕಾರ ಮಠಮಾನ್ಯಗಳ ಮೇಲೆ ನಿಯಂತ್ರಣ ಹೇರುವ ಕಾಯಿದೆ ತರುವುದು ಸರಿಯಲ್ಲ. ಆದ್ರೆ ಸರಕಾರ ಮೊದಲು ಚರ್ಚ್, ಮಸೀದಿಗಳ ಮೇಲೆ ನಿಯಂತ್ರಣ ಹೇರಲಿ ಎಂದು ಚಿದಾನಂದಮೂರ್ತಿ ಸವಾಲ್ ಹಾಕಿದ್ದಾರೆ.
Advertisement