ವಿಭಜನೆಗೆ ಕರವೇ ವಿರೋಧ

ಬಿಬಿಎಂಪಿ ವಿಭಜನೆ ಮಾಡುವುದರ ಹಿಂದೆ ಕನ್ನಡಿಗರನ್ನು ಮೂಲೆಗುಂಪು ಮಾಡುವ ಹುನ್ನಾರ ಅಡಗಿದೆ ಎಂದು...
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ

ಬೆಂಗಳೂರು: ಬಿಬಿಎಂಪಿ ವಿಭಜನೆ ಮಾಡುವುದರ ಹಿಂದೆ ಕನ್ನಡಿಗರನ್ನು ಮೂಲೆಗುಂಪು ಮಾಡುವ ಹುನ್ನಾರ ಅಡಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ದೂರಿದ್ದಾರೆ.

ಬಿಬಿಎಂಪಿ ವಿಭಜನೆ ವಿರೋಧಿಸಿ ಶುಕ್ರವಾರ ಸಂಜೆ ನಗರದ ಪುರಭವನದ ಮುಂಭಾಗದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಕರ್ನಾಟಕ ರಕ್ಷಣಾ ವೇದಿಕೆಯು ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿರುವ ಕೆಲವು ಐಟಿ ಉದ್ಯಮಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಆಗಬೇಕಿದೆ. ಅವರೇ ಸರ್ಕಾರದ ಮೇಲೆ ಒತ್ತಡ ತಂದಿರುವುದರ ಫಲವಾಗಿ ಪಾಲಿಕೆಯನ್ನು ಮೂರು ಭಾಗವಾಗಿ ವಿಭಜಿಸುವ ಪ್ರಯತ್ನ ನಡೆದಿದೆ. ಇವರ ತಂತ್ರಗಳಿಂದ ಪಾಲಿಕೆ ವಿಭಜನೆಯಾದರೆ, ನಗರದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಲಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಸುಗಮ ಆಡಳಿತದ ನೆಪಮಾಡಿಕೊಂಡು ಸುಗ್ರಿವಾಜ್ಞೆ ತರುವ ಮೂಲಕ ಪಾಲಿಕೆಯನ್ನು ವಿಭಜನೆ ಮಾಡಲು ಹೊರಟಿದೆ. ಈ ಆದೇಶಕ್ಕೆ ರಾಜ್ಯಪಾಲರು ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಪಿ. ಆಂಜನಪ್ಪ, ಬಿ. ಸಣ್ಣೀರಪ್ಪ, ನಾಗೇಂದ್ರ ಬಾಬು, ಸತೀಶ್ ಗೌಡ, ಹೇಮಲತಾ, ಸತೀಶ್ ಭಾಗವಹಿಸಿದ್ದರು. ಮೆರವಣಿಗೆ ನಂತರ ನಿಯೋಗದಲ್ಲಿ ರಾಜಭವನಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com