ಒಳ್ಳೆಯವರಾಗಿರುವುದರಿಂದಲೇ ಒಳ್ಳೆಯ ದಿನಗಳು: ರಾಜ್ಯಪಾಲ

ಜೀವನದಲ್ಲಿ ಒಳ್ಳೆಯ ದಿನಗಳ ಬಗ್ಗೆ ಕನಸು ಕಾಣುವುದಕ್ಕಿಂತ ಮೊದಲು ನಾವು ಒಳ್ಳೆಯವರಾಗುವ ಬಗ್ಗೆ ಪ್ರಯತ್ನಿಸಬೇಕು...
ವಜುಭಾಯಿ ರೂಢಾಬಾಯಿ ವಾಲಾ
ವಜುಭಾಯಿ ರೂಢಾಬಾಯಿ ವಾಲಾ

ಬೆಂಗಳೂರು: ಜೀವನದಲ್ಲಿ ಒಳ್ಳೆಯ ದಿನಗಳ ಬಗ್ಗೆ ಕನಸು ಕಾಣುವುದಕ್ಕಿಂತ ಮೊದಲು ನಾವು ಒಳ್ಳೆಯವರಾಗುವ ಬಗ್ಗೆ ಪ್ರಯತ್ನಿಸಬೇಕು. ಆಗ ಆಗುವುದೆಲ್ಲಾ ಒಳ್ಳೆಯದೇ ಆಗುತ್ತದೆ ಎಂದು
ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಹೇಳಿದ್ದಾರೆ.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕವು ವಿದ್ಯಾರ್ಥಿಗಳಿಗೆ ರಾಜಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ದೇಶಕ್ಕಾಗಿ ಬದು
ಕುವವ, ಮಡಿಯುವವ ಮಾತ್ರ ನಿಜವಾದ ಪ್ರಜೆ. ರಾಷ್ಟ್ರಪ್ರೇಮ ಪ್ರತಿಯೊಬ್ಬರಲ್ಲೂ ಇರಬೇಕು. ಮಾತೃಭೂಮಿಗಾಗಿ ಜೀವನವನ್ನು ಮುಡಿಪಾಗಿಡಬೇಕು' ಎಂದು ಹೇಳಿದರು. ಸ್ಕೌಟ್ಸ್ ಮತ್ತು

ಗೈಡ್ಸ್‍ನಲ್ಲಿ ಮಕ್ಕಳಿಗೆ ಸಂಸ್ಕೃತಿ ಸಿಗುತ್ತದೆ. ಪೋಷಕರ ಸಂಸ್ಕೃತಿ ಉತ್ತಮವಾಗಿದ್ದರೆ ಮಕ್ಕಳೂ ಸುಸಂಸ್ಕೃತರಾಗಿರುತ್ತಾರೆ. ಮಕ್ಕಳು ಶೈಕ್ಷಣಿಕವಾಗಿ ಎಷ್ಟು ಅಂಕ ಗಳಿಸಿದ್ದಾರೆ ಎಂಬುದು ಮುಖ್ಯವಲ್ಲ. ಜೀವನದಲ್ಲಿ ಎಷ್ಟು ಧೈರ್ಯವಂತರಾಗಿದ್ದಾರೆ ಎಂಬುದಷ್ಟೇ ಗಣನೆಗೆ ಬರುತ್ತದೆ. ಇಲ್ಲಿ ಧೈರ್ಯ, ಶಕ್ತಿ ಇದ್ದ ವನಿಗೆ ಮಾತ್ರ ಮರ್ಯಾದೆ ಸಿಗಲಿದೆ. ಜನತೆ ನಮ್ಮನ್ನು ಗುರುತಿಸುವಂತೆ ಬಾಳಬೇಕು. ಎಷ್ಟು ಶ್ರೀಮಂತರಾಗಿ ಬದುಕಿದ್ದೀರಿ ಎಂಬುದಕ್ಕಿಂತ, ಹೇಗೆ ಬದುಕಿದ್ದೀರಿ? ಎಂಬುದೇ ಮುಖ್ಯ ಎಂದು ಹೇಳಿದರು. ಮಕ್ಕಳು ಟಿವಿ, ಸಿನಿಮಾ ನೋಡುವುದನ್ನು ಬಿಡಬೇಕು.

ಓದಿನತ್ತ ಹೆಚ್ಚು ಶ್ರದ್ಧೆ ಇಡಬೇಕು. ಆಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಇಂಥ ನಿರ್ಣಯ ಕೈಗೊಳ್ಳಲು ಸರಳ ಜೀವನದ ಅವಶ್ಯವಿದೆ ಎಂದು ಹೇಳಿದರು. ಮಾಜಿ ಸಚಿವ, ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ, ಸಾರ್ವಜನಿಕ ಶಿಕ್ಷಣ ಆಯುಕ್ತ ಮಹಮ್ಮದ್ ಮೌಸಿನ್, ಗೈಡ್ಸ್‍ನ ರಾಜ್ಯ ಆಯುಕ್ತೆ ಗೀತಾ ನಟರಾಜ್ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com