ರು.66 ಲಕ್ಷ ನಗದು ದೋಚಿ ಪರಾರಿಯಾಗಿದ್ದವರ ಸೆರೆ

ಕೆ.ಆರ್. ಮಾರ್ಕೆಟ್ ಜಿ.ಪಿ.ಸ್ಟ್ರೀಟ್‍ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗೆ ಹಣ ತುಂಬಲು ಬಂದಿದ್ದ ವೇಳೆ ಟಾಟಾ ಸುಮೋದಲ್ಲಿದ್ದ ರು.66 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳು ಕೊನೆಗೂ ಸಿಕ್ಕಿಬಿದಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆ.ಆರ್. ಮಾರ್ಕೆಟ್ ಜಿ.ಪಿ.ಸ್ಟ್ರೀಟ್‍ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗೆ ಹಣ ತುಂಬಲು ಬಂದಿದ್ದ ವೇಳೆ ಟಾಟಾ ಸುಮೋದಲ್ಲಿದ್ದ ರು.66 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳು ಕೊನೆಗೂ ಸಿಕ್ಕಿಬಿದಿದ್ದಾರೆ.

ಪಶ್ಚಿಮ ವಲಯ ಪೊಲೀಸರು ನಡೆಸಿದ ತೀವ್ರ ಶೋಧದಲ್ಲಿ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ರು.30.23 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಇನ್ನು ರು.35 ಲಕ್ಷ ವಸೂಲಿಯಾಗಬೇಕಿದೆ. ಅದರೊಂದಿಗೆ ತಲೆಮರೆಸಿಕೊಂಡಿರುವ ಆರೋಪಿಗಳಿಗೂ ಹುಡುಕಾಟ ಮುಂದುವರೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕೇರಳದ ಕಲ್ಲಿಕೋಟೆ ಮೂಲದ ಜೆಮ್ ಶೀರ್ (23), ಮಡಿಕೇರಿಯ ಕೆ.ಎಂ.ಪ್ರಭಾಕರ್(44), ಕಡೂರಿನ ಹೇಮಂತ್ ಕುಮಾರ್(27), ಜೀವರ್ಗಿಯ ನಂದಕುಮಾರ್(38), ಮಾಗಡಿಯ ರೇಣುಕಪ್ಪ(42), ಕೊಳ್ಳೆಗಾಲದ ಮೂರ್ತಿ(32) ಬೆಂಗಳೂರಿನ ಜವರೇಗೌಡನ ದೊಡ್ಡಿಯ ಮಂಜುನಾಥ್ ಬಂಧಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಗಳ ಬಂಧನದ ವಿವರ ನೀಡಿದರು.

ಡಿಸಿಪಿ ಲಾಬುರಾಮ್ ಮಾರ್ಗದರ್ಶನದಲ್ಲಿ ಎಸಿಪಿ ರಾಜೇಂದ್ರ ಕುಮಾರ್ ನೇತೃತ್ವದ ತಂಡ ಪ್ರಕರಣದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು. ಮಂಗಳೂರು, ಕೊಡಗು, ಮೈಸೂರು ಸೇರಿದಂತೆ ನಾನಾ ಪ್ರದೇಶಗಳ ಜತೆಗೆ ಗೋವಾ, ಕೇರಳ, ತಮಿಳುನಾಡಿಗೂ ತೆರಳಿತ್ತು. ಅಲ್ಲದೇ, ಆರೋಪಿಗಳ ಪತ್ತೆಗಾಗಿ ಬ್ರಿಂಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲಕ್ಷ್ಮೀ ಟ್ರಾವೆಲ್ಸ್ ಮಾಲೀಕರನ್ನು ವಿಚಾರಣೆ ನಡೆಸಲಾಗಿತ್ತು.

ಮೊದಲಿಗೆ ಜೆಮಶೀರ್ ಬಂಧನ ಸಣ್ಣದೊಂದು ಸುಳಿವಿನ ಮೇರೆಗೆ ತನಿಖಾ ತಂಡ ಮೊದಲು, ಟಾಟಾ ಸುಮೋ ಚಾಲಕನಾಗಿದ್ದ ಕಲ್ಲಿಕೋಟೆ ಮೂಲದ ಜೆಮಶೀರ್ ಎಂಬಾತನನ್ನು ಬಂಧಿಸಿತ್ತು. ನಂತರ ಆತ ನೀಡಿದ ಮಾಹಿತಿಯಲ್ಲಿ ಉಳಿದ ಆರೋಪಿಗಳನ್ನು ಬಂಧಿಸಿದೆ. ಇವರಲ್ಲಿ ಪ್ರಭಾಕರ್, ಹೇಮಂತ್ ಕುಮಾರ್, ರೇಣುಕಪ್ಪ ಮತ್ತು ನಂದ ಕುಮಾರ್ ನಗರದ ಆನೇಪಾಳ್ಯದಲ್ಲಿರುವ ಸೆಕ್ಯುರಿಟಿ ಮತ್ತು ಇಂಟಲಿಜೆನ್ಸ್ ಸರ್ವಿಸ್ ಕಂಪನಿಯಲ್ಲಿ ಗನಮ್.ಾನ್ ಮತ್ತು ಚಾಲಕರಾಗಿದ್ದಾರೆ.

ದರೋಡೆ ಹೇಗೆ ರೂಪಿಸಿದರು?
ಬ್ರಿಂಕ್ಸ್ ಕಂಪನಿ ನಗರದ ನಾನಾ ಬ್ಯಾಂಕ್‍ಗಳ ಎಟಿಎಂಗೆ ಹಣ ತುಂಬುವ ಏಜೆನ್ಸಿಯಾಗಿತ್ತು. ಇಲ್ಲಿ ನಿತ್ಯ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದರು. ಲಕ್ಷ್ಮಿಟ್ರಾವೆಲ್‍ನ ಚಾಲಕ ಬ್ರಿಂಕ್ಸ್ ಕಂಪನಿಗೆ ಚಾಲಕನಾಗಿದ್ದ. ಇವರ ನಡುವೆ ದರೋಡೆಯ ಹೊಂದಾಣಿಕೆ ಏರ್ಪಟ್ಟಿತ್ತು. ಅಂತೆಯೇ, 2015 ಮಾರ್ಚ್31 ರಂದು ಆಡುಗೋಡಿಯಲ್ಲಿರುವ ಬ್ರಿಂಕ್ಸ್ ಇಂಡಿಯಾ ಸಂಸ್ಥೆಯಿಂದ ಕೆಎ-30-ಸಿ6522 ನಂಬರಿನ ಟಾಟಾ ಸುಮೋ ಕೆ.ಆರ್. ಮಾರ್ಕೆಟ್ ಜಿ.ಪಿ.ಸ್ಟ್ರೀಟ್‍ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಬಂದಿತ್ತು.

 ಗನ್‍ಮ್ಯಾನ್ ಮೂತ್ರ ವಿಸರ್ಜನೆಗೆಂದು ಕೆಳಗಿಳಿದ ಸಂದರ್ಭದಲ್ಲಿ ಸುಮೋ ಚಾಲಕ ಜೆಮಶೀರ್ ಮತ್ತವನ ತಂಡ, ನಗದು ದೋಚಿ ಪರಾರಿಯಾಗಿತ್ತು. ಪ್ರಕರಣದಲ್ಲಿ ಈಗ 7 ಮಂದಿ ಸಿಕ್ಕಿಬಿದಿದ್ದಾರೆ. ಇನ್ನು ಹಲರಿವದ್ದಾರೆ. ಅವರನ್ನು ಬಂಧಿಸಬೇಕಿದೆ. ಆನಂತರವೇ ಉಳಿದ ಹಣ ವಸೂಲಾಗಲಿದೆ ಎಂದ ವಿವರಿಸಿದ ಎಂ.ಎನ್. ರೆಡ್ಡಿ, ಪ್ರಕರಣ ಭೇದಿಸಿದ ಪಶ್ಚಿಮ ವಲಯ ತಂಡಕ್ಕೆ ರು.1ಲಕ್ಷ ಬಹುಮಾನ ಘೋಷಿಸಿದರು. ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್, ದಯಾನಂದ್, ಡಿಸಿಪಿ ಲಾಬುರಾಮ್ ಹಾಜರಿದ್ದರು.

ತುಂಬಾ ದಿನಗಳಿಂದಲೇ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಅಂದು ಟಾಟಾ ಸುಮೋದಲ್ಲಿದ್ದ ಹಣವನ್ನು ದೋಚುವಾಗ ಮುಖಕ್ಕೆ ಮಂಕಿ ಕ್ಯಾಪ್ ಹಾಕಿದ್ದರು. ಹತ್ತಿರವಿದ್ದ ಸಿಸಿಟಿವಿ ಕ್ಯಾಮರಾಗಳಿಗೆ ತಮ್ಮ ಚಹರೆ ಸೆರೆಯಾಗದ್ದಂತೆ ಎಚ್ಚರ ವಹಿಸಿದ್ದರು. ತಾವು ಕೆಲಸ ನಿರ್ವಹಿಸುವ ಕಂಪನಿಗೆ ಸುಳ್ಳು ವಿಳಾಸ ನೀಡಿದ್ದರು. ಮೊಬೈಲ್ ಸೀಮ್ ಕಾರ್ಡ್‍ಗೂ ನಕಲಿ ವಿಳಾಸ ಕೊಟ್ಟಿದ್ದರು. ಹೀಗಾಗಿ ಆರೋಪಿಗಳ ಪತ್ತೆ ಸವಾಲಾಗಿತ್ತು.

-ಎಂ.ಎನ್, ರೆಡ್ಡಿ, ನಗರ ಪೊಲೀಸ್ ಆಯುಕ್ತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com