ಇನ್ನು ಮುಂದೆ ಮೆಕ್‍ಡೊನಾಲ್ಡ್ಸ್ ನಲ್ಲಿ ದೊರೆಯಲಿದೆ ಕಾಫಿ

ಇಷ್ಟು ದಿನ ಕೋಕ್, ಬರ್ಗರ್, ಹ್ಯಾಶ್ ಬ್ರೌನ್ಸ್, ಚಿಕನ್, ಪನ್ನೀರ್ ಫಿಂಗರ್ ಚಿಪ್ಸ್, ಐಸ್‍ಕ್ರೀಂನಂಥ ತಿನಿಸುಗಳಿಗೆ ಮಾತ್ರ ಸೀಮಿತ ವಾಗಿದ್ದ ಮೆಕ್‍ಡೊನಾಲ್ಡ್ಸ್ (ಎಂಸಿಡಿ) ನಲ್ಲಿ ಇನ್ನು ಮುಂದೆ ವಿಭಿನ್ನ ಕಾಫಿಗಳೂ ದೊರೆಯಲಿವೆ...
ಇನ್ನು ಮುಂದೆ ಮೆಕ್‍ಡೊನಾಲ್ಡ್ಸ್ ನಲ್ಲಿ ದೊರೆಯಲಿದೆ ಕಾಫಿ
ಇನ್ನು ಮುಂದೆ ಮೆಕ್‍ಡೊನಾಲ್ಡ್ಸ್ ನಲ್ಲಿ ದೊರೆಯಲಿದೆ ಕಾಫಿ

ಬೆಂಗಳೂರು: ಇಷ್ಟು ದಿನ ಕೋಕ್, ಬರ್ಗರ್, ಹ್ಯಾಶ್ ಬ್ರೌನ್ಸ್, ಚಿಕನ್, ಪನ್ನೀರ್ ಫಿಂಗರ್ ಚಿಪ್ಸ್, ಐಸ್‍ಕ್ರೀಂನಂಥ ತಿನಿಸುಗಳಿಗೆ ಮಾತ್ರ ಸೀಮಿತ ವಾಗಿದ್ದ ಮೆಕ್‍ಡೊನಾಲ್ಡ್ಸ್ (ಎಂಸಿಡಿ) ನಲ್ಲಿ ಇನ್ನು ಮುಂದೆ ವಿಭಿನ್ನ ಕಾಫಿಗಳೂ ದೊರೆಯಲಿವೆ. ಎಂಸಿಡಿಗೆ ಬರುವ ಗ್ರಾಹಕರು ಕಾಫಿಗಾಗಿ ಬೇರೆಡೆ ಹೋಗುವುದನ್ನು ತಪ್ಪಿಸಲು ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ 3 ಎಂಸಿಡಿ ಆಹಾರ ಮಳಿಗೆಯಲ್ಲಿ ಮೆಕ್‍ಕೆಫೆ ಪ್ರಾರಂಭಿಸಲಾಗಿದೆ.

ಸೋಮವಾರ ಜೆಪಿನಗರ  ಎಂಸಿಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾರ್ಡ್ ಕ್ಯಾಸ್ಟಲ್ ರೆಸ್ಟೋರೆಂಟ್ಸ್ ಪ್ರೈ.ಲಿ. ನ ವ್ಯವಸ್ಥಾಪಕ ನಿರ್ದೇಶಕಿ ಸ್ಮಿತಾ ಜಾಟಿಯಾ, ಎಂಸಿಡಿ ಬೆಂಗಳೂರು ಮೂಲಕ ದಕ್ಷಿಣ ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಮುಂಬೈ, ಅಹ್ಮದಾಬಾದ್, ನಾಸಿಕ್, ಔರಂಗಾಬಾದ್, ಪುಣೆಗಳಲ್ಲಿ ಈಗಾಗಲೇ 30 ರೆಸ್ಟೋರೆಂಟ್ ಗಳಲ್ಲಿ ಪ್ರಾರಂಭಿಸಲಾಗಿದೆ.

ಮುಂದಿನ 5 ವರ್ಷಗಳಲ್ಲಿ 75 ರಿಂದ 150 ಮಕೆ ಕೆಫೆ ರೆಸ್ಟೋರೆಂಟ್ ಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದರು.ಹಲವು ಸುಂಗಧದ ಕಾಫಿ, ಚಹಾ ಇದೀಗ ಲಭ್ಯವಿದೆ. ಈ ನಿಟ್ಟಿನಲ್ಲಿ ಶೇ.100ರಷ್ಟು ಅರೇಬಿಕಾ ಕಾಫಿಯನ್ನೇ ಬಳಸಲಾಗುತ್ತಿದೆ.

ಗುಣಮಟ್ಟದ ಕಾಫಿ ಬೀಜಗಳಿಗೆ ಒಳ್ಳೆಯ ದರವನ್ನು ನಿಗದಿಪಡಿಸಿದ್ದು, ಚಿಕ್ಕಮಗಳೂರು ಕಾಫಿ ತೋಟದಿಂದಲೇ ಖರೀದಿಸಲಾಗುತ್ತಿದೆ. ಕೆಫುಶಷಿನೊ, ಲಾಟೆ, ಐಸ್ಟ್ ಮೋಚಾ ಮತ್ತು ಫ್ರಾಪ್ ಗಳು ಗ್ರಾಹಕರ ಸ್ವಾದಕ್ಕೆ ಸಿದ್ಧವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com