ಸರಣಿ ರಜೆ: ಪ್ರಯಾಣಿಕರ ಜೇಬಿಗೆ ಕತ್ತರಿ

ಸಾರಿಗೆ ಮುಷ್ಕರ, ಕಾರ್ಮಿಕರ ದಿನಾಚರಣೆ ಸೇರಿದಂತೆ ಈ ವಾರಾಂತ್ಯದಲ್ಲಿರುವ ಸರಣಿ ರಜೆಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿವೆ..
ಖಾಸಗಿ ಬಸ್ ಸೇವೆ (ಸಂಗ್ರಹ ಚಿತ್ರ)
ಖಾಸಗಿ ಬಸ್ ಸೇವೆ (ಸಂಗ್ರಹ ಚಿತ್ರ)

ಬೆಂಗಳೂರು: ಸಾರಿಗೆ ಮುಷ್ಕರ, ಕಾರ್ಮಿಕರ ದಿನಾಚರಣೆ ಸೇರಿದಂತೆ ಈ ವಾರಾಂತ್ಯದಲ್ಲಿರುವ ಸರಣಿ ರಜೆಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿವೆ.

ಗುರುವಾರ ಸಾರಿಗೆ ಮುಷ್ಕರ, ಶುಕ್ರವಾರ ಕಾರ್ಮಿಕರ ದಿನಾಚರಣೆ. ಹೀಗಾಗಿ ವಾರಾಂತ್ಯದ ಸರಣಿ ರಜೆಗಳಲ್ಲಿ ಬೆಂಗಳೂರಿನಿಂದ ಹೊರ ಊರಿಗೆ ಪ್ರಯಾಣಿಸುವವರ ಜೇಬಿಗೆ ಕತ್ತರಿ ಬೀಳಲಿದೆ.

ವಾರಾಂತ್ಯದ ಸರಣಿ ರಜೆಗಳ ಲಾಭ ಪಡೆಯುವ ಉದ್ದೇಶದಿಂದ ಖಾಸಗಿ ಬಸ್‌ ಮಾಲೀಕರು ಟಿಕೆಟ್‌ ದರಗಳನ್ನು ಹೆಚ್ಚಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿ, ಮಂಗಳೂರು, ವಿಜಯಪುರ, ಕಲಬುರಗಿ, ಬೀದರ್‌ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾಗುವ ಸ್ಲೀಪರ್, ಸೆಮಿ ಸ್ಲೀಪರ್, ವೊಲ್ವೋ ಸೇರಿದಂತೆ ವಿವಿಧ ಬಸ್ಸುಗಳ ಪ್ರಯಾಣ ದರದಲ್ಲಿ ಹೆಚ್ಚಳವಾಗಿದೆ.

ಖಾಸಗಿ ಬಸ್ಸುಗಳಲ್ಲಿನ ಪ್ರಯಾಣ ದರ ಶೇ.10ರಿಂದ 12ರಷ್ಟು ಹೆಚ್ಚಳವಾಗಿದ್ದು, 700 ರುಗಳ ಟಿಕೆಟ್ ದರ 900 ರೂ.ಗೆ ಏರಿಕೆಯಾಗಿದೆ. 1,200 ರೂ. ಇರುವ ದರ 1,600 ರೂ. ವರೆಗೆ ಏರಿಕೆಯಾಗಿದ್ದು, ಜನರು ಹೆಚ್ಚಿನ ಹಣ ಪಾವತಿ ಮಾಡಿ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ. ಬುಧವಾರದಿಂದಲೇ ಮುಂಗಡ ಟಿಕೆಟ್‌ ಬುಕ್ಕಿಂಗ್ ಆರಂಭವಾಗಿದ್ದು, ದುಬಾರಿ ಹಣ ನೀಡಿಯೇ ಪ್ರಯಾಣಿಕರು ತಮ್ಮ-ತಮ್ಮ ಟಿಕೆಟ್ ಗಳನ್ನು ಕಾಯ್ದಿರಿಸುತ್ತಿದ್ದಾರೆ.

ಟಿಕೆಟ್ ದರ ಏರಿಕೆಯಾದರೂ ಪ್ರಯಾಣ ಅನಿವಾರ್ಯ, ಹೀಗಾಗಿ ದುಬಾರಿ ಹಣ ನೀಡಿ ಊರಿಗೆ ತೆರಳುತ್ತಿದ್ದೇವೆ ಎಂದು ಪ್ರಯಾಣಿಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com