ಪಾಯಲ್ ಸುರೇಖಾ ಕೇಸು: ಚಾರ್ಜ್‍ಶೀಟ್ ಸಲ್ಲಿಸಿದ ಸಿಬಿಐ

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಟಿ ಉದ್ಯೋಗಿ ಪಾಯಲ್ ಸುರೇಖಾ ಕೊಲೆ ಪ್ರಕರಣ ಸಂಬಂಧ ಚೆನ್ನೈ ಘಟಕದ ಸಿಬಿಐ ಅಧಿಕಾರಿಗಳ ತಂಡ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ...
ಕೊಲೆಯಾದ ಪಾಯಲ್ ಸುರೇಖಾ (ಸಂಗ್ರಹ ಚಿತ್ರ)
ಕೊಲೆಯಾದ ಪಾಯಲ್ ಸುರೇಖಾ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಟಿ ಉದ್ಯೋಗಿ ಪಾಯಲ್ ಸುರೇಖಾ ಕೊಲೆ ಪ್ರಕರಣ ಸಂಬಂಧ ಚೆನ್ನೈ ಘಟಕದ ಸಿಬಿಐ ಅಧಿಕಾರಿಗಳ ತಂಡ
ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.

ಪಾಯಲ್ ಸುರೇಖಾ ಪತಿಯ ಸ್ನೇಹಿತ ಜೇಮ್ಸ್ ಕುಮಾರ್ ರೇ ಹಂತಕ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಚೆನ್ನೈನ ಸಿಬಿಐ ಅಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿರುವುದನ್ನು ಖಚಿತಪಡಿಸಿದ್ದಾರೆ. 2010ರ ಡಿಸೆಂಬರ್ 17ರಂದು ಜೆಪಿ ನಗರದ ಅಪಾರ್ಪ್‍ಮೆಂಟ್ ವೊಂದರ ಫ್ಲಾಟ್‍ನಲ್ಲಿ ವಾಸವಿದ್ದ ಪಾಯಲ್ ಸುರೇಖಾ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದರು. ಆರಂಭದಲ್ಲಿ ಪತಿ ಮಿಶ್ರಾ ಕೃತ್ಯದ ಹಿಂದೆ ಇದ್ದಾರೆಂದು ಶಂಕಿಸಲಾಗಿತ್ತು.

ನಂತರ ಪತಿ ಸ್ನೇಹಿತ ಜೇಮ್ಸ್ ಕುಮಾರ್ ರೇ ಹಂತಕ ಎನ್ನುವುದನ್ನು ನಗರ ಅಪರಾಧ ಘಟಕದ ಅಧಿಕಾರಿಗಳು ಪತ್ತೆ ಮಾಡಿದ್ದರು. ಮಿಶ್ರಾ ಅವಮಾನ ಮಾಡಿದ್ದರಿಂದ ಕುಪಿತಗೊಂಡ ಜೇಮ್ಸ್ ರೇ, ಆ ದ್ವೇಷವನ್ನು ಆತನ ಪತ್ನಿ ಸುರೇಖಾ ಮೇಲೆ ತೀರಿಸಿಕೊಂಡಿದ್ದ ಎಂದು ಸಿಸಿಬಿ ಪೊಲೀಸರು ತನಿಖೆಯಲ್ಲಿ ತಿಳಿದು ಬಂದಿತ್ತು. ಆದರೆ, ಇದನ್ನು ಪ್ರಶ್ನಿಸಿ ಜೇಮ್ಸ್ ರೇ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com