ರು.412.90 ಕೋಟಿ ಮೌಲ್ಯದ 91.30 ಎಕರೆ ಭೂಮಿ ವಶ

ಒತ್ತುವರಿ ತೆರವು ಮುಂದುವರಿಸಿರುವ ಜಿಲ್ಲಾಡಳಿತ ರು.412.90 ಕೋಟಿ ಮೌಲ್ಯದ 91.30 ಎಕರೆ ಭೂಮಿ ವಶಪಡಿಸಿಕೊಂಡಿದೆ...
ಕೆರೆ ಒತ್ತವರಿ ತೆರವು ಕಾರ್ಯಾಚರಣೆ (ಸಂಗ್ರಹ ಚಿತ್ರ)
ಕೆರೆ ಒತ್ತವರಿ ತೆರವು ಕಾರ್ಯಾಚರಣೆ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಒತ್ತುವರಿ ತೆರವು ಮುಂದುವರಿಸಿರುವ ಜಿಲ್ಲಾಡಳಿತ ರು.412.90 ಕೋಟಿ ಮೌಲ್ಯದ 91.30 ಎಕರೆ ಭೂಮಿ ವಶಪಡಿಸಿಕೊಂಡಿದೆ.

ಉತ್ತರ ತಾಲೂಕು, ದಾಸನಪುರ ಹೋಬಳಿ, ಉಳ್ಳಗೌಡನಹಳ್ಳಿಯ ಸ.ನಂ. 47 ಮತ್ತು ಕೆಂಗೇನಹಳ್ಳಿಯ  ಸ.ನಂ.21 ರಲ್ಲಿ ಜಂಟಿಯಾಗಿ ಒಟ್ಟು 1.12 ಎಕರೆ, ಗೆಜ್ಜೆನಹಳ್ಳಿಯ ಸ.ನಂ.2 ರಲ್ಲಿ 1 ಎಕರೆ  ರಸ್ತೆ ಒತ್ತುವರಿಯಾಗಿದ್ದು, ತಹಸೀಲ್ದಾರ್ ಶಿವಪ್ಪ ಎಚ್.ಲಮಾಣಿ ನೇತೃತ್ವದಲ್ಲಿ ತೆರವು ಮಾಡಲಾಯಿತು. ಈ ಜಾಗ ಅಂದಾಜು ರು.5 ಕೋಟಿ ಮೌಲ್ಯ ಹೊಂದಿದೆ. ಉತ್ತರ (ಅಪರ) ತಾಲೂಕು,  ಯಲಹಂಕ ಹೋಬಳಿ, ಬೆಳ್ಳಹಳ್ಳಿಯ ಸ.ನಂ.55 ರಲ್ಲಿ 07111979 ರಲ್ಲಿ ಮಂಜೂರಾಗಿದ್ದ ಜಮೀನಿನಲ್ಲಿ ಯಾವುದೇ ಕಂದಾಯ ದಾಖಲಾತಿಗಳು ಇಲ್ಲದೆ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ 60  ಎಕರೆ ಒತ್ತುವರಿ ಮಾಡಲಾಗಿತ್ತು.

ತಹಸೀಲ್ದಾರ್ ಬಾಳಪ್ಪ ಹಂದಿಗುಂದ ನೇತೃತ್ವದ ತಂಡ ರು.350 ಕೋಟಿ ಮೌಲ್ಯದ ಭೂಮಿ ವಶಪಡಿಸಿಕೊಂಡಿತು. ದಕ್ಷಿಣ ತಾಲೂಕು, ಬೇಗೂರು ಹೋಬಳಿ, ಮಾಯಸಂದ್ರದ ಸ.ನಂ.73ರಲ್ಲಿ 6 ಎಕರೆ, ಸ.ನಂ.23 ರಲ್ಲಿ 20 ಗುಂಟೆ, ಸ.ನಂ.15 ರಲ್ಲಿ 10 ಗುಂಟೆ ಭೂಮಿಯನ್ನು ತಹಸೀಲ್ದಾರ್ ಡಾ.ಮಮತ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಈ ಜಾಗ ರು.12.90 ಕೋಟಿ ಮೌಲ್ಯಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com