
ಬೆಂಗಳೂರು: ನಂಬಿಕೆ, ಧರ್ಮ, ವಯಸ್ಸು , ಶಿಕ್ಷಣ, ಸಾಮಾಜಿಕವಾಗಿ ಮನುಷ್ಯರಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರಿಂದಲೇ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತಿವೆ. ಜನರು ಈ ವ್ಯತ್ಯಾಸಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು. ಇಲ್ಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರು ತಾಯಿ ಎದೆಹಾಲು ಕುಡಿದು ಬೆಳೆದಿ ದ್ದಾರೆ ಎಂದು ಶಾಂತಿದೂತ ಬೌದ್ಧ ಗುರು ದಲೈಲಾಮಾ ಹೇಳಿದರು.
ಬೆಂಗಳೂರಿನಲ್ಲಿ ಏಷ್ಯನ್ ಆರಬ್ ಚೇಂಬರ್ ಆಫ್ ಕಾಮರ್ಸ್' ಹಮ್ಮಿಕೊಂಡಿದ್ದ `ಜಾಗತಿಕ ಶಾಂತಿ ಆರ್ಥಿಕ ಸಮ್ಮೇಳನ'ದಲ್ಲಿ ಮಾತನಾಡಿದ ಅವರು, ``ದೇಶ, ಧಾರ್ಮಿಕ ಆಸಕ್ತಿ ಮೊದಲು, ನಂತರ ಜಾಗತಿಕ ಆಸಕ್ತಿ ಬೆಳೆಸಿಕೊಳ್ಳ ಬೇಕು. ಇದು ಶಾಂತಿಯ ಮೂಲ ಮಂತ್ರ. ಒಂದು ದೇಶದಲ್ಲಿ ವಿವಿಧ ರೀತಿಯ ಜನಾಂಗದವರನ್ನು ಮತ್ತು ಒಂದೇ ಭಾಷೆಯಲ್ಲಿ ಹಲವು ಮುಖಗಳನ್ನು ನಾವು ಕಾಣಬಹುದು. ಆದರೆ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಶಾಂತಿಯ ಸ್ವರೂಪ ಒಂದೇ ಎಂದು ದಲೈಲಾಮಾ ಪ್ರತಿಪಾದಿಸಿದರು.
ಇಂದಿನ ಶಿಕ್ಷಣ ಮಾನವಿಯ ಮೌಲ್ಯ ತಿಳಿಸುವ ಶಿಕ್ಷಣ ವ್ಯವಸ್ಥೆಯಾಗಿ ಉಳಿದಿಲ್ಲ . ನೈಜ ಸಂಬಂಧ ಬೆಳೆಸುವ ಶಿಕ್ಷಣ ವ್ಯವಸ್ಥೆ ಯುವ ಪೀಳಿಗೆಗೆ ಅವಶ್ಯವಿದೆ ಎಂದು ಹೇಳಿದರು.
ಏಷ್ಯನ್-ಅರಬ್ ಚೇಂಬರ್ ಆಫ್ ಕಾಮರ್ಸ್ ಕಾರ್ಯ ನಿರ್ವಾಹಕ ನಿರ್ದೇಶಕ ಆಸಿಫ್ ಇಕ್ಬಾಲ್, ``ವಿಶ್ವವೇ ಇಂದು ಭಯೋತ್ಪಾದಕರ ಮುಷ್ಟಿಯಲ್ಲಿ ದ್ದು ಈ ಹಿಡಿತದಿಂದ ಹೊರಬರ
ಬೇಕಾದ ಅನಿವಾರ್ಯತೆ ಇದೆ. ಸಾಮಾನ್ಯ ಮುಸ್ಲಿಮರನ್ನು ಶಿಕ್ಷಿತರನ್ನಾಗಿಸುವುದು ಮತ್ತು ಮುಸ್ಲಿಂ ಹಾಗೂ ಮುಸ್ಲಿಮೇತರ ಸಮು ದಾಯದಲ್ಲಿ ಉಗ್ರಗಾಮಿತ್ವಉತ್ತೆ ೀಜಿಸುವ ಪ್ರವೃತ್ತಿಗೆ ಕಡಿವಾಣ ಹಾಕುವುದು ಮುಖ್ಯೆ ಎಂದು ಹೇಳಿದರು.
Advertisement