81.7 ಎಕರೆ ಸರ್ಕಾರಿ ಭೂಮಿ ವಶ

ಬೆಂಗಳೂರು ನಗರ ಜಿಲ್ಲೆಯ ಉತ್ತರ, ದಕ್ಷಿಣ, ಪೂರ್ವ ಹಾಗೂ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಸುಮಾರುರು.184.70 ಕೋಟಿ ಮೌಲ್ಯದ 81.7 ಎಕರೆ ಸರ್ಕಾರಿ ಭೂಮಿಯನ್ನು ತೆರವುಗೊಳಿಸಲಾಗಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಉತ್ತರ, ದಕ್ಷಿಣ, ಪೂರ್ವ ಹಾಗೂ ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಸುಮಾರುರು.184.70 ಕೋಟಿ ಮೌಲ್ಯದ 81.7 ಎಕರೆ ಸರ್ಕಾರಿ ಭೂಮಿಯನ್ನು ತೆರವುಗೊಳಿಸಲಾಗಿದೆ.

ಜಿಲ್ಲಾಧಿಕಾರಿ ವಿ.ಶಂಕರ್ ಅವರ ನಿರ್ದೇ ಶನದಲ್ಲಿ ಕಾರ್ಯಚರಣೆ ನಡೆಯಿತು. ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿಯ ಕುದುರೆಗೆರೆ ಗ್ರಾಮದಲ್ಲಿ ಸುಮಾರು 2 ಕೋಟಿ ಮೌಲ್ಯದ ಕೆರೆ, ಯಲಹಂಕ ಹೋಬಳಿಯ ಆವಲಹಳ್ಳಿಯ ಕೆರೆ, ಸಿಂಗನಾಯಕನಹಳ್ಳಿ, ನಾಗದಾಸನಹಳ್ಳಿ ಹೊನ್ನೇನಹಳ್ಳಿ ಗ್ರಾಮಗಳಲ್ಲಿ ಒಟ್ಟು 35 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ ಸುಮಾರುರು.134.70 ಕೋಟಿ ಎಂದು ಅಂದಾಜಿಸಲಾಗಿದೆ.

ಕೆಂಗೇರಿಯ ಕುಂಬಳಗೋಡಿನಲ್ಲಿ ಶಾಲೆಯೊಂದು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು, ಪಾರ್ಕಿಂಗ್‍ಗೆ ಬಳಸಿಕೊಂಡಿದ್ದ ಜಾಗ, ರಾಮೋಹಳ್ಳಿ ಗ್ರಾಮದಲ್ಲಿ ಮುಕ್ತಿನಾಗ ದೇವಾಲಯದವರು ಕೆರೆಯಂಗಳದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಜಾಗ, ಕೆ.ಆರ್.ಪುರಂದಲ್ಲಿ 2 ಎಕರೆ, ವರ್ತೂರು ಹೋಬಳಿಯ 1.4 ಎಕರೆ, ಮುಳ್ಳೂರು ಗ್ರಾಮದ 13 ಗುಂಟೆ, ಹರಳೂರು ಗ್ರಾಮದ 13 ಗುಂಟೆ, ಬೊಮ್ಮೇನಹಳ್ಳಿ ಗ್ರಾಮದ 1.4 ಎಕರೆ, ಹಂಚರಹಳ್ಳಿ ಗ್ರಾಮದಲ್ಲಿ 34 ಗುಂಟೆ ಸರ್ಕಾರಿ ಜಾಗ ಒತ್ತುವರಿಯಾಗಿತ್ತು.

ಇದನ್ನೂ ತೆರವು ಮಾಡಲಾಗಿದೆ. ಆನೇಕಲ್ ತಾಲೂಕಿನ ಮಾಯಾಸಂದ್ರ ಗ್ರಾಮದ ಸರ್ಕಾರಿ ಕೆರೆಯ 14.29 ಎಕರೆ, ಎಸ್.ಮೇಡಹಳ್ಳಿ ಗ್ರಾಮದಲ್ಲಿ 10 ಎಕರೆ ಭೂಮಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಪ್ರದೇಶಗಳಲ್ಲೂ ಏಕಕಾಲಕ್ಕೆ ದಾಳಿ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com