ಕ್ಯಾನ್ಸರ್ ನೂತನ ಕಟ್ಟಡಕ್ಕೆ ಇಂದು ಪ್ರಣಬ್ ಅಡಿಗಲ್ಲು

ಕ್ಯಾನ್ಸರ್‍ಪೀಡಿತ ಬಡವ ಹಾಗೂ ಕಡು ಬಡವ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಕಿದ್ವಾಯಿ ಸಂಸ್ಥೆಯು ಮತ್ತಷ್ಟು ಸೇವೆ ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ರು.130 ಕೋಟಿ ವೆಚ್ಚದಲ್ಲಿ `ಕರ್ನಾಟಕ ರಾಜ್ಯ ಕ್ಯಾನ್ಸರ್ ಸಂಸ್ಥೆ'ಯ ನೂತನ ಕಟ್ಟಡಕ್ಕೆ ಡಿ.23ರಂದು...
ರಾಷ್ಟ್ರಪತಿ ಪ್ರಣವ್ ಮುಖರ್ಜಿ (ಸಂಗ್ರಹ ಚಿತ್ರ)
ರಾಷ್ಟ್ರಪತಿ ಪ್ರಣವ್ ಮುಖರ್ಜಿ (ಸಂಗ್ರಹ ಚಿತ್ರ)

ಬೆಂಗಳೂರು: ಕ್ಯಾನ್ಸರ್‍ಪೀಡಿತ ಬಡವ ಹಾಗೂ ಕಡು ಬಡವ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಕಿದ್ವಾಯಿ ಸಂಸ್ಥೆಯು ಮತ್ತಷ್ಟು ಸೇವೆ ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ
ರು.130 ಕೋಟಿ ವೆಚ್ಚದಲ್ಲಿ `ಕರ್ನಾಟಕ ರಾಜ್ಯ ಕ್ಯಾನ್ಸರ್ ಸಂಸ್ಥೆ'ಯ ನೂತನ ಕಟ್ಟಡಕ್ಕೆ ಡಿ.23ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶಿಲಾನ್ಯಾಸ ಮಾಡಲಿದ್ದಾರೆ.

ಬುಧವಾರ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ವಿವರ ನೀಡಿದ ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ. ಕೆ.ಬಿ. ಲಿಂಗೇಗೌಡ, ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ,
ಕೇಂದ್ರ ರಾಸಾಯನಿಕ ಗೊಬ್ಬರ ಖಾತೆ ಸಚಿವ ಅನಂತಕುಮಾರ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಜಗತ್ ಪ್ರಕಾಶ್ ನಡ್ಡ ಪಾಲ್ಗೊಳ್ಳಲಿದ್ದಾರೆ ಎಂದು
ತಿಳಿಸಿದರು.

ರೋಗಿಗಳಿಗೆ ಉಪಯೋಗ: ಈ ನೂತನ ಯೋಜನೆಗೆ ಕೇಂದ್ರ ಸರ್ಕಾರದಿಂದ ರು 90 ಕೋಟಿ ಮತ್ತು ರಾಜ್ಯ ಸರ್ಕಾರವು ರು.30 ಕೋಟಿ ನೀಡಿದೆ. ಪ್ರಾದೇಶಿಕ ಕ್ಯಾನ್ಸರ್ ಆರೈಕೆ ಕೇಂದ್ರವಾಗಿರುವ ಕಿದ್ವಾಯಿ ಸ್ಮಾರಕ ಸಂಸ್ಥೆಯನ್ನು `ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ'ಯನ್ನಾಗಿಸಿದಂತಾಗುತ್ತದೆ. ಸಂಸ್ಥೆಯನ್ನು ಉನ್ನತೀಕರಣ ಮಾಡುವುದರಿಂದ ವಿಶ್ವಮಟ್ಟದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಚಿಕಿತ್ಸಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ: ಕ್ಯಾನ್ಸರ್ ಪೀಡಿತರಲ್ಲಿ ಶೇ.40ಕ್ಕೂ ಹೆಚ್ಚಿನ ರೋಗಿಗಳು ತಂಬಾಕು ಸೇವನೆ ಮಾಡುವವರೇ ಆಗಿದ್ದಾರೆ. ಹೆಚ್ಚಿನ ಜನರಲ್ಲಿ ಮೂಢನಂಬಿಕೆ ಮತ್ತು ನಿರ್ಲಕ್ಷ್ಯವೇ ಕ್ಯಾನ್ಸರ್ ಗೆ ಕಾರಣವಾಗಿದೆ. ಕ್ಯಾನ್ಸರ್ ನ್ನು ನಾಲ್ಕು ಹಂತದಲ್ಲಿ ಪತ್ತೆ ಹಚ್ಚಲಿದ್ದು, ಹೆಚ್ಚಿನ ರೋಗಿಗಳು 3-4ನೇ ಹಂತದಲ್ಲಿ ದಾಖಲಾಗುತ್ತಾರೆ ಎಂದರು.

ಕಿದ್ವಾಯಿ ಸಂಸ್ಥೆಯು ರಾಜ್ಯಾದ್ಯಂತ  ಶೀಘ್ರ ಪತ್ತೆ- ಕ್ಯಾನ್ಸರ್ ಪತ್ತೆ ಎಂಬ ಘೋಷವಾಕ್ಯದಡಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸುತ್ತಿದೆ. ಅಕ್ಟೋಬರ್ ಅನ್ನು ಸ್ತನ ಕ್ಯಾನ್ಸರ್ ಅರಿವು ತಿಂಗಳನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com