ನೀರಲ್ಲ, ಬೆಂಕಿ ಕಾರುವ ಕೊಳವೆಬಾವಿ!

ಜಿಲ್ಲೆಯ ಮುಧೋಳ ತಾಲೂಕಿನ ಸೋರೆಗಾಂವಿ ಗ್ರಾಮದ ರೈತರೊಬ್ಬರ ಕೊಳವೆ ಬಾವಿಯಲ್ಲಿ ಅನಿಲ(ಗ್ಯಾಸ್) ಕಾಣಿಸಿಕೊಂಡಿದ್ದು, ಕಡ್ಡಿ ಗೀರಿದರೆ ಬೆಂಕಿ ಹೊತ್ತಿಕೊಳ್ಳುತ್ತಿದೆ...
ನೀರಲ್ಲ, ಬೆಂಕಿ ಕಾರುವ ಕೊಳವೆಬಾವಿ!
ನೀರಲ್ಲ, ಬೆಂಕಿ ಕಾರುವ ಕೊಳವೆಬಾವಿ!

ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಸೋರೆಗಾಂವಿ ಗ್ರಾಮದ ರೈತರೊಬ್ಬರ ಕೊಳವೆ ಬಾವಿಯಲ್ಲಿ ಅನಿಲ(ಗ್ಯಾಸ್) ಕಾಣಿಸಿಕೊಂಡಿದ್ದು, ಕಡ್ಡಿ ಗೀರಿದರೆ ಬೆಂಕಿ ಹೊತ್ತಿಕೊಳ್ಳುತ್ತಿದೆ.

ಭೀಮಪ್ಪ ಹನುಮಪ್ಪ ಗೋಲಬಾವಿ ಎಂಬುವರು 2 ವರ್ಷದ ಹಿಂದೆ 450 ಅಡಿ ಆಳದ ಕೊಳವೆ ಬಾವಿಯನ್ನು ಕೊರೆಸಿ, ನೀರನ್ನು ಬಳಸುತ್ತಿದ್ದರು. ಮೂರು ದಿನಗಳಿಂದ ಬಾವಿಯಲ್ಲಿ ಹೊಗೆಯಾಡುತ್ತಿತ್ತು. ಇದು ಅವರ ಅಚ್ಚರಿಗೆ ಕಾರಣವಾಗಿತ್ತು. ಹೀಗಾಗಿ ಬೆಂಕಿ ಕಡ್ಡಿ ಗೀರಿ ಪರೀಕ್ಷಿಸಿದಾಗ ಜ್ವಾಲೆ ಎದ್ದಿದೆ. ತಕ್ಷಣ ನೀರು ಸುರಿದು ಒಳಗಿರುವ ಮೋಟಾರ್ ಪಂಪ್
ಮೇಲೆತ್ತಿದ್ದಾರೆ. ಸುದ್ದಿ ಹರಡಿ ಸ್ಥಳಕ್ಕೆ ಸುತ್ತಮುತ್ತಲ ನೂರಾರು ಮಂದಿ ಜಮಾಯಿಸಿದ್ದರು. ಕೆಲವರು ಯುರೇನಿಯಂ ನಿಕ್ಷೇಪವಿದೆಯೇ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.

ಡಿಸಿ ಭೇಟಿ: ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಅವರನ್ನು ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಕಳುಹಿಸಿದ್ದಾರೆ. ಸಂಜೆ ಅವರೇ ಖುದ್ದು ಭೇಟಿ ನೀಡಿ ಅವಲೋಕಿಸಿದರು. ಈ ಪ್ರದೇಶದ ಆಸುಪಾಸಿನಲ್ಲಿರುವ ಹತ್ತಕ್ಕೂ ಹೆಚ್ಚು ಕೊಳೆವೆ ಬಾವಿಯಲ್ಲಿ ನೀರಿದ್ದು, ಇದೊಂದರಿಂದ ಮಾತ್ರ ಅನಿಲ ಬರುತ್ತಿದೆ.

ಈ ಅನಿಲಕ್ಕೆ ವಾಸನೆಯಿಲ್ಲ. ಕಬ್ಬಿನ ತ್ಯಾಜ್ಯ ಸುರಿದು ಅಲ್ಲೇನಾದರೂ ಮಿಥೇನ್ ಸೃಷ್ಟಿಯಾಗಿ ಬಯೋ ಗ್ಯಾಸ್ ಆಗಿದೆಯೇ? ಅಥವಾ ಜಿಲ್ಲೆ ಯಲ್ಲಿ ಅಗಾಧ ಪ್ರಮಾಣದ ಸುಣ್ಣದ ನಿಕ್ಷೇಪವಿರುವುದು ಕಾರಣವೇ ಎಂಬ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಂದ ವಿವರಣೆ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹಗಲು ಹೊತ್ತು ಮಾತ್ರ ಅನಿಲ ಬರುತ್ತಿದ್ದು, ರಾತ್ರಿ ಬರುತ್ತಿಲ್ಲ ಎನ್ನುತ್ತಾರೆ ರೈತ ಭೀಮಪ್ಪ ಹನುಮಪ್ಪ ಗೊಲಗಾವಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com