ಅಧೀನ ಕಾರ್ಯದರ್ಶಿಗಳಿಗೆ ಬಡ್ತಿ ಯೋಗ

ಸುಮಾರು 50ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳಿಗೆ ವೇತನ ಬಡ್ತಿ ಯೋಗ ನೀಡಿ ಸರ್ಕಾರ ಹೊಸ ವರ್ಷದ ಮುನ್ನಾ ದಿನ ಶುಭ ಸುದ್ದಿ ನೀಡಿದೆ...
ಅಧೀನ ಕಾರ್ಯದರ್ಶಿಗಳಿಗೆ ಬಡ್ತಿ ಯೋಗ (ಸಂಗ್ರಹ ಚಿತ್ರ)
ಅಧೀನ ಕಾರ್ಯದರ್ಶಿಗಳಿಗೆ ಬಡ್ತಿ ಯೋಗ (ಸಂಗ್ರಹ ಚಿತ್ರ)

ಬೆಂಗಳೂರು: ಸುಮಾರು 50ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳಿಗೆ ವೇತನ ಬಡ್ತಿ ಯೋಗ ನೀಡಿ ಸರ್ಕಾರ ಹೊಸ ವರ್ಷದ ಮುನ್ನಾ ದಿನ ಶುಭ ಸುದ್ದಿ ನೀಡಿದೆ.

ಹಾಲಿ ಅಧೀನ ಕಾರ್ಯದರ್ಶಿ ವೃಂದದಲ್ಲಿದ್ದ 27 ಅಧಿಕಾರಿಗಳಿಗೆ ಉಪ ಕಾರ್ಯದರ್ಶಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶ  ಹೊರಡಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯ ಎನ್.ಜಗನ್ನಾಥ್, ಶಿಕ್ಷಣ ಇಲಾಖೆ ಎಂ.ತಾರಾ, ಸಿಆಸುಇನ ಯು. ಎಚ್.ನಾರಾಯಣಸ್ವಾಮಿ, ಕಂದಾಯ ಇಲಾಖೆಯ ಉಮಾದೇವಿ,  ಕೆ.ಭಾನುಮತಿ, ಒಳಾಡಳಿತ ಇಲಾಖೆಯ ವೈ.ಕೆ.ಪ್ರಕಾಶ್, ಆರ್ಥಿಕ ಇಲಾಖೆಯ ಬಿ.ಎಲ್.ರಮೇಶ್, ಆಹಾರ ಇಲಾಖೆಯ ಎಂ.ಆರ್.ಪ್ರಹ್ಲಾದ್, ತಹಸೀಲ್ದಾರ್ ಎನ್.ಸಿ.ಜಗದೀಶ್,   ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಟಿ.ಎಸ್.ಚಂದ್ರಶೇಖರ್, ವಿ. ಹನುಮಂತಯ್ಯ, ಸಿಆಸುಇನ ಎಸ್.ನಾಗರಾಜಪ್ಪ, ಜಿ.ಎಸ್. ಮಂಗಳ, ಆರ್ಥಿಕ ಇಲಾಖೆಯ ಪದ್ಮಾವತಿ,  ಸಹಕಾರ ಇಲಾಖೆಯ ಜಿ.ಆರ್.ನಾಗರಾಜು, ರಾಜ್ಯಪಾಲರ ಸಚಿವಾಲಯದ ಆರ್.ಕಲ್ಪನಾ, ಸಿಆಸುಇನ ಎಸ್.ರೇಣುಕ, ಚಂದ್ರಶೇಖರ, ಎಲ್.ಗೀತಾ, ತಾಂತ್ರಿಕ ಶಿಕ್ಷಣ ಇಲಾಖೆಯ  ಬಿ.ನಾಗಭೂಷಣ, ವೈದ್ಯಕೀಯ ಶಿಕ್ಷಣ ಇಲಾಖೆಯ ಶಂಭುಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿ. ಮಂಜುಳ, ಕೆಎಚ್‍ಎಸ್‍ಆರ್‍ಡಿಸಿನ ಐ.ವಿಜಯಕುಮಾರ್, ಒಳಾಡಳಿತ ಇಲಾಖೆಯ  ಎಚ್.ಆರ್.ಪುಟ್ಟೇಗೌಡ, ಜೆ.ಡಿ.ಮಧುಚಂದ್ರ ತೇಜಸ್ವಿ, ಕೇಂದ್ರ ಕಾನೂನು ಸಚಿವರ ಹೆಚ್ಚುವರಿ ಆಪ್ತ ಕಾರ್ಯದರ್ಶಿಯಾಗಿರುವ ಕೆ.ಚಿರಂಜೀವಿ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಜಿ.ಎಸ್. ಪ್ರಸನ್ನಕುಮಾರ್ ಅವರಿಗೆ ಪದೋನ್ನತಿ ಲಭ್ಯವಾಗಿದ್ದು, ವಿವಿಧ ಇಲಾಖೆಗಳಲ್ಲಿ ಉಪ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದಾರೆ.

ಬಡ್ತಿಯೊಂದಿಗೆ ವರ್ಗ: ಐಎಎಸ್ ಅಧಿಕಾರಿಗಳಾದ ಕುರ್ಮ ರಾವ್ ಜಿ.ಪಂ.ರಾಯಚೂರು, ಅನ್ನಿಯಸ್ ಕಣ್ಮಣಿ ಜಾಯ್ ಜಿ.ಪಂ.ಬೆಂಗಳೂರು ನಗರ, ಚಾರುಲತಾ ಸೋಮಲ್ ಜಿ.ಪಂ.ಕೊಡಗು,  ಎಂ.ಸುಂದರೇಶ್ ಬಾಬು ಜಿ.ಪಂ. ವಿಜಯಪುರ, ಪವನ್ ಕುಮಾರ್ ಜಿ.ಪಂ.ಬೀದರ್, ನಿತೇಶ್ ಪಾಟೀಲ್ ಜಿ.ಪಂ.ಚಿತ್ರದುರ್ಗ, ಆರ್. ರಾಮಚಂದ್ರನ್ ಜಿ.ಪಂ.ಕೊಪ್ಪಳ, ವಿಕಾಸ್ ಕಿಶೋರ್  ಜಿ.ಪಂ.ಯಾದಗಿರಿ, ರಿಚರ್ಡ್ ವಿನ್ಸೆಂಟ್ ಡಿಸೋಜ ಜಂಟಿ ಆಯುಕ್ತ, ಬಿಬಿಎಂಪಿ ದಕ್ಷಿಣಕ್ಕೆ ವರ್ಗಾಯಿಸಲಾಗಿದ್ದು, ವೇತನ ಬಡ್ತಿಯನ್ನೂ ನೀಡಲಾಗಿದೆ. ಜೊತೆಗೆ 14 ಐಎಎಸ್ ಅಧಿಕಾರಿಗಳಿಗೆ  ಅಧಿಕಾರಿಗಳಿಗೆ ವೇತನ ಬಡ್ತಿ ನೀಡಲಾಗಿದ್ದು, ಹಾಲಿ ಇರುವ ಹುದ್ದೆಯಲ್ಲಿಯೇ ಮುಂದುವರಿಯುವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com