ಕೋರ್ಟ್ ಮೆಟ್ಟಿಲೇರಿದ ತೊಗಾಡಿಯಾ

VHP ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ (ಸಂಗ್ರಹ ಚಿತ್ರ)
VHP ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಹಿಂದೂ ವಿರಾಟ ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸಿದ್ದ ತಮ್ಮ ವಿರುದ್ಧ ನಗರ ಪ್ರವೇಶಿಸದಂತೆ ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಪ್ರವೀಣ್ ತೊಗಡಿಯಾ ಬುಧವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಫೆ.8 ರಂದು ಬಸವನಗುಡಿಯಲ್ಲಿ ವಿಎಚ್‍ಪಿ ಸಮಾವೇಶ ಆಯೋಜಿಸಿದ್ದು, ತೊಗಾಡಿಯಾ ಪಾಲ್ಗೊಳ್ಳುವಿಕೆಗೆ ಅನುಮತಿ ಕೋರಿ ವಿಎಚ್‍ಪಿ ಸದಸ್ಯರು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ತೊಗಾಡಿಯಾ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಇದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹಾಗೂ ಆಂತರಿಕ ಭದ್ರತಾ ವಿಭಾಗದ ಡಿಸಿಪಿ ವರದಿ ನೀಡಿದ್ದರಿಂದ ಆಯುಕ್ತರು, ಫೆ.5ರಿಂದ ಸ11ರವರೆಗೆ ನಗರಕ್ಕೆ ಆಗಮಿಸದಂತೆ ನಿಷೇಧ ಹೇರಿದ್ದರು. ತೊಗಾಡಿಯಾ ಅರ್ಜಿ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com