ಭೂ ಒತ್ತುವರಿ ತೆರವು (ಸಂಗ್ರಹ ಚಿತ್ರ)
ಜಿಲ್ಲಾ ಸುದ್ದಿ
67 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು
ಬೆಂಗಳೂರು: ಜಿಲ್ಲಾಡಳಿತದಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಶುಕ್ರವಾರ ರು. 67.50 ಕೋಟಿ ಮೌಲ್ಯದ 39.30 ಎಕರೆ ಭೂ ಒತ್ತುವರಿ ತೆರವುಗೊಳಿಸಲಾಗಿದೆ.
ಉತ್ತರ ತಾಲೂಕು, ಯಲಹಂಕ ಹೋಬಳಿ, ಸಿಂಗಾಪುರ ಗ್ರಾಮದಲ್ಲಿ ಅಂದಾಜು ರು. 11.50 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ವಶಪಡಿಸಿಕೊಂಡಿದೆ. ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಕೆ.ಗೊಲ್ಲಹಳ್ಳಿ ಗ್ರಾಮದಲ್ಲಿ ರು. 1 ಕೋಟಿ ಮೌಲ್ಯದ ಭೂಮಿ, ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿ, ಪಟ್ಟಂದೂರು ಅಗ್ರಹಾರ ಗ್ರಾಮ, ಬಿದರಹಳ್ಳಿ ಹೋಬಳಿ, ಬೊಮ್ಮನಹಳ್ಳಿ, ಮಾರಗೊಂಡನಹಳ್ಳಿ ಗ್ರಾಮದಲ್ಲಿ ಅಂದಾಜು ರು. 35 ಕೋಟಿ ಮೌಲ್ಯದ ಮತ್ತು ಆನೇಕಲ್ ತಾಲೂಕು, ಸರ್ಜಾಪುರ ಹೋಬಳಿ, ಸೋಮಪುರ, ಕೊಡಲಿಪುರ ಗ್ರಾಮದ ರು. 20 ಕೋಟಿ ಮೌಲ್ಯದ ಜಾಗಗಳನ್ನು ತೆರವುಗೊಳಿಸಲಾಯಿತು. ಅಪರ ಜಿಲ್ಲಾಧಿಕಾರಿ ಆರ್. ವೆಂಕಟಾಚಲಪತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ