ಏರೋ ಇಂಡಿಯಾ ಮುಂದಿನ ಆವೃತ್ತಿ ಬೆಂಗಳೂರಲ್ಲೇ!

ಮನೋಹರ್ ಪರ್ರಿಕರ್
ಮನೋಹರ್ ಪರ್ರಿಕರ್

ಯಲಹಂಕ ವಾಯುನೆಲೆ: ಏರೋ ಇಂಡಿಯಾ ಮುಂದಿನ ಆವೃತ್ತಿಯೂ ಯಲಹಂಕ ವಾಯುನೆಲೆಯಲ್ಲಿಯೇ ನಡೆಯಲಿದೆ. ಗೋವಾ ಅಥವಾ ಬೇರೆ ರಾಜ್ಯಕ್ಕೆ
ಸ್ಥಳಾಂತರಿಸುತ್ತೇವೆ ಎಂಬ ಊಹಾಪೋಹ ಬೇಡ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಸ್ಪಷ್ಟಪಡಿಸಿದ್ದಾರೆ.

ಯಲಹಂಕ ವಾಯುನೆಲೆಗೆ ಬಂದು ಇಳಿಯುವವರೆಗೂ ಸ್ಥಳಾವಕಾಶ ಇದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ವಾಯುನೆಲೆಯಲ್ಲಿ ಖಾಲಿ ಇರುವ ಜಾಗವನ್ನು ನೋಡಿದಾಗ ಏರೋ ಇಂಡಿಯಾವನ್ನು ಇಲ್ಲಿಂದ ಬೇರೆಡೆ ಬೇರೆಡೆಗೆ ಸ್ಥಳಾಂತರಿಸುವ ಯಾವುದೇ ಅನಿವಾರ್ಯವಿಲ್ಲ ಎನ್ನುವುದು ನನ್ನ ಅರಿವಿಗೆ ಬಂದಿದೆ.

ವಾಯುನೆಲೆಯಲ್ಲಿನ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡರೆ ಈಗಿನ ದುಪ್ಪಟ್ಟು ಪ್ರಮಾಣದ ಪ್ರದರ್ಶನ ನಡೆಸಬಹುದಾಗಿದೆ. ಏರೋ ಇಂಡಿಯಾ ನಡೆಸಲು ಬೆಂಗಳೂರಿಗಿಂತ ಪ್ರಶಸ್ತ ಪ್ರದೇಶ ಮತ್ತೊಂದಿಲ್ಲ ಎನ್ನುವುದು ನನ್ನ ನಂಬಿಕೆಯಾಗಿದೆ. ನಾನು ಗೋವಾ ರಾಜ್ಯಕ್ಕೆ
ಸೇರಿದವನು ಎಂಬ ಕಾರಣಕ್ಕೆ ಮುಂದಿನ ಏರೋ ಇಂಡಿಯಾ ಗೋವಾದಲ್ಲಿ ನಡೆಯುತ್ತದೆ ಎನ್ನುವುದು ಕೇವಲ ಗಾಳಿಸುದ್ದಿ.

ಸವಲತ್ತು ಹಾಗೂ ಕೆಲ ನಿಯಮಗಳನ್ನು ಪಾಲಿಸಿ ಪ್ರದರ್ಶನ ಆಯೋಜಿಸಲಾಗುತ್ತದೆ ಎಂದು ಏರೋ ಇಂಡಿಯಾ ಉದ್ಘಾಟನೆ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಅವರು ತಿಳಿಸಿದರು.

ಹಿಂದಿನ ಏರೋ ಇಂಡಿಯಾಗಿಂತ ಈ ಬಾರಿ ಹೆಚ್ಚಿನ ಪಾಲ್ಗೊಳ್ಳುವಿಕೆ ಕಂಡುಬಂದಿದೆ. ಯಾವುದೇ ದೇಶದಿಂದ ನಿರಾಸಕ್ತಿ ಕಂಡು ಬಂದಿಲ್ಲ ಎಂದು ಪರ್ರಿಕರ್ ಹೇಳಿದರು. ಆದರೆ ರಷ್ಯಾಕ್ಕೆ ಸಂಬಂಧಿಸಿದ ನಿರ್ದಿಷ್ಟ ಪ್ರಶ್ನೆಗೆ ರಕ್ಷಣಾ ಸಚಿವರು ಹಾರಿಕೆ ಉತ್ತರ ನೀಡಿದರು.

ಎಚ್‍ಎಎಲ್ ಉತ್ಪಾದನೆ ಸಾಮಥ್ರ್ಯಹೆಚ್ಚಳ:
ಎಚ್‍ಎಎಲ್‍ನ ಪ್ರಸ್ತುತ ಉತ್ಪಾದನೆ ಸಾರ್ಮಥ್ಯದಿಂದ ರಕ್ಷಣಾ ವಿಭಾಗದ ಬೇಡಿಕೆ
ಪೂರೈಸಲು ಸಾಧ್ಯವಿಲ್ಲ. ಒಟ್ಟಾರೆ 2 ಸಾವಿರಕ್ಕೂ ಅಧಿಕ ಹೆಲಿಕಾಫ್ಟರ್ಗಳ ಅಗತ್ಯವಿದೆ. ಜತೆಗೆ 40 ತೇಜಸ್ಸ್ ಯುದ್ಧ ವಿಮಾನ ನೀಡಬೇಕಿದೆ. ಇನ್ನೇರಡು ವರ್ಷದಲ್ಲಿ ತೇಜಸ್ಸ್ ದೊರೆಯುವ ನಿರೀಕ್ಷೆಯಿದೆ. ಇನ್ನು ಕೇವಲ 20-30 ಹೆಲಿಕಾಪ್ಟರ್ಗಳನ್ನು ಮಾತ್ರ ನಿರ್ಮಿಸುವ ಸೌಲಭ್ಯವಿದೆ.
ಇದನ್ನು ವಿಸ್ತರಿಸಬೇಕಿದೆ. 100ರ ಅಂಕಿಯನ್ನು ದಾಟಿದರೆ ಮಾತ್ರ ಸೇನೆಯ ಬೇಡಿಕೆಯನ್ನು ತಕ್ಕ ಮಟ್ಟಿಗೆ ಪೂರೈಸಲು ಸಾಧ್ಯ. ಈ ನಿಟ್ಟಿನಲ್ಲಿ ಎಚ್‍ಎಎಲ್ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಪರ್ರಿಕರ್ ಹೇಳಿದರು.

ಖರೀದಿಯಲ್ಲಿ ಯುಪಿಎ ವೈಫಲ್ಯ
ಬೇಡಿಕೆ ಹಾಗೂ ಹಣಕಾಸು ಲಭ್ಯತೆ ಪರಿಗಣಿಸದೇ ಯುಪಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ
ಸಾಮಗ್ರಿಗಳು ವ್ಯವಹಾರ ಕುದುರಿಸುವ ಪ್ರಯತ್ನ ನಡೆದಿದೆ. ಇದರಿಂದ ರಕ್ಷಣಾ ಸಾಮಗ್ರಿಗಳ
ಖರೀದಿಯಲ್ಲಿ ವಿಳಂಬವಾಗಿದೆ. ರಫಾಲೆ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿ ವರದಿ  ನೀಡುವಂತೆ ಸೂಚಿಸಿದ್ದು, ಮಾರ್ಚ್ ಅಂತ್ಯದೊಳಗೆ ವರದಿ ಬರಲಿದೆ. ಬಳಿಕ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com