ಮೆಹ್ದಿಗೆ 14 ದಿನ ನ್ಯಾಯಾಂಗ ಬಂಧನ

ಮೆಹ್ದಿ ಮಸ್ರೂರ್ ಬಿಸ್ವಾಸ್
ಮೆಹ್ದಿ ಮಸ್ರೂರ್ ಬಿಸ್ವಾಸ್

ಬೆಂಗಳೂರು: ಇಸಿಸ್ ಉಗ್ರ ಸಂಘಟನೆ ಪರ ಟ್ವೀಟರ್ ನಿರ್ವಹಣೆ ಮಾಡುತ್ತಿದ್ದ ಮೆಹ್ದಿ ಮಸ್ರೂರ್ ಬಿಸ್ವಾಸ್ ಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನಗರದ 9ನೇ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.

ಇಸಿಸ್ ಪರ ಟ್ವೀಟರ್ ನಿರ್ವಹಣೆ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೆಹ್ದಿಯನ್ನು ಡಿಸೆಂಬರ್ 12ರಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 15 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿತ್ತು. ಮೆಹ್ದಿ ಕಸ್ಟಡಿ ಅವಧಿ ನಿನ್ನೆಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮೆಹ್ದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಬಂಧಿತ ಮೆಹದಿ ಮೊಬೈಲ್ ಮತ್ತು ಲ್ಯಾಪ್‌­­ಟಾಪ್‌ ಎರಡರಿಂದಲೂ ಸಾಮಾಜಿಕ ಜಾಲ ತಾಣಗಳನ್ನು ಬಳಕೆ ಮಾಡುತ್ತಿದ್ದ. ಲ್ಯಾಪ್‌ಟಾಪ್‌ನ ಒಂದು ಫೋಲ್ಡರ್‌ನಲ್ಲಿ ಸಿರಿಯಾ ಇರಾಕ್‌ ಯುದ್ಧಗಳು ಹಾಗೂ ಐ.ಎಸ್‌ ಸಂಘಟನೆಗೆ ಸೇರಿದ 1.2 ಜಿ.ಬಿಯಷ್ಟು ಮಾಹಿತಿ ಸಂಗ್ರಹಿಸಿದ್ದ.

shammiwitness ಖಾತೆಯ ಎಲ್ಲ ಟ್ವೀಟ್‌­ಗಳನ್ನು ಪರಾಮರ್ಶೆ ಮಾಡಲಾ­ಗು­ತ್ತಿದ್ದು. ಜತೆಗೆ ಈತ ಹೆಚ್ಚು ಸಂಭಾಷಣೆ ನಡೆ­­ಸಿರುವ ವ್ಯಕ್ತಿಗಳ ಪೂರ್ವಾಪರ  ಬಗ್ಗೆಯೂ ವಿವರ ಪಡೆಯಲಾಗುತ್ತಿದೆ.  ಆತನ ಬ್ಯಾಂಕ್‌ ಖಾತೆಯನ್ನು ಪರಿಶೀ­ಲಿ­ಸ­ಲಾಗಿದ್ದು, ಯಾವುದೇ ಉಗ್ರ ಸಂಘ­ಟ­ನೆಯಿಂದ ಹಣ ಬಂದಿರುವ ಬಗ್ಗೆ ಈವ­ರೆಗೂ ಮಾಹಿತಿ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆ ವೇಳೆ ಕೆಲವು ವಿಷಯಗಳನ್ನು ಬಾಯ್ಬಿಟ್ಟಿರುವುದಾಗಿಯೂ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com