ಕೋಲಾರ: ತಾಲೂಕಿನ ನಾಗಲಾಪುರ ಗೊಲ್ಲಹಳ್ಳಿಯ ನೀಲಗಿರಿ ತೋಪಿನಲ್ಲಿ ತಾತ ಮತ್ತು ಮೊಮ್ಮಗನ ಮೃತ ದೇಹಗಳು ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಮೃತರನ್ನು ವೆಂಕಟಪ್ಪ(60) ಹಾಗೂ ಮಹೇಶ್(15) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಇಟ್ಟಿಗೆ ಚೂರುಗಳು ಕಂಡುಬಂದಿರುವುದರಿಂದ ಕೊಲೆ ಶಂಕೆಯೂ ವ್ಯಕ್ತವಾಗಿದೆ.
ಮೃತರ ಕೊರಳಿನಲ್ಲಿ ರಕ್ತಸ್ರಾವವಾಗಿದ್ದು ಚಿರತೆಗಳು ದಾಳಿ ಮಾಡಿರುವುದರಿಂದ ಘಟನೆ ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಯಪಟ್ಟಿದ್ದಾರೆ. ಚಿರತೆಗಳು ರಸ್ತೆಗೆ ಅಡ್ಡಲಾಗಿ ಬಂದಾಗ ಇಬ್ಬರೂ ಬಿದ್ದಿರಬಹುದು. ಆಗ ಚಿರತೆ ಮೊದಲು ವೆಂಕಟಪ್ಪ ಮೇಲೆ ದಾಳಿ ಮಾಡಿ ರಕ್ತ ಹೀರಿರಬಹುದು. ಇದಕ್ಕೆ ಪ್ರತಿರೋಧ ಒಡ್ಡಿ ಇಟ್ಟಿಗೆಯಿಂದ ಚಿರತೆಯನ್ನು ಓಡಿಸಲು ಯತ್ನಿಸಿದ ಮಹೇಶ್ ಮೇಲೂ ದಾಳಿ ಮಾಡಿ ಸಾಯಿಸಿರಬಹುದೆಂಬುದು ಪೊಲೀಸ್ ಅಧಿಕಾರಿಗಳು ಶಂಕೆ.
Advertisement