ಅಂತಾರಾಷ್ಟ್ರೀಯ ನಾಣ್ಯ ವಿನ್ಯಾಸ ಕಲಾ ಸ್ಪರ್ಧೆಯಲ್ಲಿ ಬೆಂಗಳೂರು ವಿದ್ಯಾರ್ಥಿನಿಗೆ ಬಹುಮಾನ

ಜಪಾನ್‍ನಲ್ಲಿ ನಡೆದ ಅಂತಾ ರಾಷ್ಟ್ರೀಯ ನಾಣ್ಯ ವಿನ್ಯಾಸ ಸ್ಪರ್ಧೆಯಲ್ಲಿ ನಗರದ ಮೌಂಟ್ ಕಾರ್ಮಲ್ ಕಾಲೇಜಿ..
ಹರಿಣಿಶ್ರೀ ವಿನ್ಯಾಸ ಮಾಡಿರುವ ಪ್ರಶಸ್ತಿ ವಿಜೇತ ಪದಕ (ಸಂಗ್ರಹ ಚಿತ್ರ)
ಹರಿಣಿಶ್ರೀ ವಿನ್ಯಾಸ ಮಾಡಿರುವ ಪ್ರಶಸ್ತಿ ವಿಜೇತ ಪದಕ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಜಪಾನ್‍ನಲ್ಲಿ ನಡೆದ ಅಂತಾ ರಾಷ್ಟ್ರೀಯ ನಾಣ್ಯ ವಿನ್ಯಾಸ ಸ್ಪರ್ಧೆಯಲ್ಲಿ ನಗರದ ಮೌಂಟ್ ಕಾರ್ಮಲ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಬಿ.ಟಿ.ಹರಿಣಿಶ್ರೀ ಅವರು ನಾಲ್ಕನೇ ಬಹುಮಾನ ಹಾಗೂ ಸ್ಪೆಷಲ್ ಜ್ಯೂರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಐದು ದೇಶಗಳ ಒಟ್ಟು 187 ಕಲಾಕೃತಿಗಳ ಪೈಕಿ ಸಂಸ್ಥೆಯ 14 ವಿದ್ಯಾರ್ಥಿಗಳು ಕಳುಹಿಸಿದ್ದ 33 ಕಲಾಕೃತಿಗಳಲ್ಲಿ ಹರಿಣಿ ಅವರ `ಕಾಸ್ಮಿಕ್ ಡ್ಯಾನ್ಸರ್' ಎಂಬ ಶಿವನ ಕಲಾಕೃತಿ ವಿಶೇಷ ಮನ್ನಣೆಗೆ ಪಾತ್ರ ವಾಗಿದೆ ಎಂದು ಲಲಿತಕಲಾ ಸೆಂಟರ್ ಫಾರ್ ವಿಶುಯಲ್ ಆರ್ಟ್ಸ್ ಸಂಸ್ಥೆ ಅಧ್ಯಕ್ಷ ಎಸ್.ಜಯವಿನು ಕುಮಾರ್ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಸ್ಪರ್ಧೆಯಲ್ಲಿ ಒಟ್ಟು 4 ಉತ್ತಮ ಕಲಾಕೃತಿಯನ್ನು ಗುರುತಿಸಲಾಗಿದ್ದು, ಹರಿಣಿ ಅವರ ಕಲಾಕೃತಿಗೆ 418 ಡಾಲರ್ (ಸುಮಾರು 25 ಸಾವಿರ ರುಪಾಯಿ) ನಗದು ಬಹುಮಾನ ಸಿಕ್ಕಿದೆ. `ಜಗದ ನರ್ತಕ ನಟರಾಜ' ಎಂಬ ಶೀರ್ಷಿಕೆಯಡಿ ನಾಣ್ಯದ ಎರಡು ಮುಖಗಳನ್ನು ವಿನ್ಯಾಸಗೊಳಿಸಿ ಕಲಾಕೃತಿ ರಚಿಸಿದ್ದ ಹರಿಣಿ, ಭರತನಾಟ್ಯ, ಕಥಕ್ ನೃತ್ಯಗಾರ್ತಿಯೂ ಆಗಿದ್ದು, ಈ ಪ್ರಶಸ್ತಿ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದೆ ಬಿ.ಟಿ.ಹರಿಣಿಶ್ರೀ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com