ತುರ್ತು ಚಿಕಿತ್ಸೆಗೆ ಬೀಸ್ಟ್ ತಂಡ ಮನೆಗೇ ಬರುತ್ತೆ ದ್ವಿಚಕ್ರ

ರೋಗಿ ತುರ್ತು ಪರಿಸ್ಥಿತಿಗೆ ಒಳಗಾದರೆ ಮನೆಯಲ್ಲೇ ಐಸಿಯು ನಿರ್ಮಿಸುವ `ಬೀಸ್ಟ್' ದ್ವಿಚಕ್ರ ಆಂಬ್ಯುಲೆನ್ಸ್ ಸೇವೆಯನ್ನು ಬ್ರೂಕ್ ಫೀಲ್ಡ್ ಆಸ್ಪತ್ರೆ ಆರಂಭಿಸಿದೆ.
ಬೈಕ್ ಆ್ಯಂಬುಲೆನ್ಸ್ (ಸಾಂದರ್ಭಿಕ ಚಿತ್ರ)
ಬೈಕ್ ಆ್ಯಂಬುಲೆನ್ಸ್ (ಸಾಂದರ್ಭಿಕ ಚಿತ್ರ)

ಬೆಂಗಳೂರು: ರೋಗಿ ತುರ್ತು ಪರಿಸ್ಥಿತಿಗೆ ಒಳಗಾದರೆ ಮನೆಯಲ್ಲೇ ಐಸಿಯು ನಿರ್ಮಿಸುವ `ಬೀಸ್ಟ್' ದ್ವಿಚಕ್ರ ಆಂಬ್ಯುಲೆನ್ಸ್ ಸೇವೆಯನ್ನು ಬ್ರೂಕ್ ಫೀಲ್ಡ್ ಆಸ್ಪತ್ರೆ ಆರಂಭಿಸಿದೆ.

ರೋಗಿ ಬದುಕುಳಿಯುವ ಸಾಧ್ಯತೆಯ ಅಮೂಲ್ಯ ಸಮಯವನ್ನು (ಗೋಲ್ಡನ್ ಅವರ್) ವ್ಯರ್ಥ ಮಾಡದೆ, ರೋಗಿ ಇರುವಲ್ಲಿಗೆ ತಜ್ಞರು ಬಂದು ಚಿಕಿತ್ಸೆ ನೀಡಲು ಬ್ರೂಕ್ ಫೀಲ್ಡ್ ಆಸ್ಪತ್ರೆ ಬೀಸ್ಟ್
(ಬ್ರೂಕ್ ಫೀಲ್ಡ್ ಎಮರ್ಜೆನ್ಸಿ ಆಂಡ್ ಆಕ್ಸಿಡೆಂಟ್ ಸಪೋರ್ಟ್ ಟೀಂ) ತಂಡವನ್ನು ರಚಿಸಿದೆ. ದೂರವಾಣಿ ಕರೆ ಮೂಲಕ ಮಾಹಿತಿ ಪಡೆಯುವ ಬೀಸ್ಟ್ ತಂಡ, ಕರೆ ಸ್ವೀಕರಿಸಿದ ಕೂಡಲೇ ದ್ವಿಚಕ್ರ ವಾಹನದಲ್ಲಿ ಬಂದು ಚಿಕಿತ್ಸೆ ನೀಡುತ್ತದೆ. ಆಮ್ಲಜನಕದ ಸಿಲಿಂಡರ್, ಇನ್ ಕ್ಯುಬೇಶನ್ ಕಿಟ್, ಮಾನಿಟರ್ ಯಂತ್ರ, ವೆಂಟಿಲೇಟರ್, ವಿವಿಧ ಚುಚ್ಚುಮದ್ದು ಸೇರಿದಂತೆ ಐಸಿಯು ಕೇಂದ್ರದ ಎಲ್ಲ ವ್ಯವಸ್ಥೆಯನ್ನೂ ವಾಹವದಲ್ಲಿ ಇಡಲಾಗಿರುತ್ತದೆ. ಇದನ್ನೇ ಬಳಸಿಕೊಂಡು ಅಗತ್ಯವಿದ್ದರೆ ಮಾತ್ರ ರೋಗಿಯ ಮನೆಯಲ್ಲೇ ತಾತ್ಕಾಲಿಕ ಐಸಿಯು ನಿರ್ಮಿಸಿ ಚಿಕಿತ್ಸೆ ನೀಡಲಾಗುತ್ತದೆ.

ಮೊಬೈಲ್ ತಂತ್ರಾಂಶ ಹಾಗೂ ನೇರ ವೀಡಿಯೋ ಪ್ರಸಾರದ ಮೂಲಕ ಆಸ್ಪತ್ರೆಯ ತಜ್ಞರನ್ನು ಸಂಪರ್ಕಿಸುವ ಇಬ್ಬರು ಸಿಬ್ಬಂದಿ, ರೋಗಿ ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಾರೆ. ತುರ್ತು ಚಿಕಿತ್ಸೆ ನೀಡುವುದರೊಂದಿಗೆ ಹಿರಿಯ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಾರೆ.

ನೋಂದಣಿ: ಸಾರ್ವಜನಿಕರು ಬೀಸ್ಟ್ ಸೇವೆ ಪಡೆಯಲು ಮುಂಚಿತವಾಗಿ ಆಸ್ಪತ್ರೆಯನ್ನು ಸಂಪರ್ಕಿಸಿ ಅಥವಾ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಯ ನೋಂದಣಿಗೆ ರು.500 ಶುಲ್ಕವಿದ್ದು, ಕುಟುಂಬ ಸದಸ್ಯರೆಲ್ಲರನ್ನೂ ನೋಂದಾಯಿಸಬಹುದು. ನೋಂದಣಿ ವೇಳೆ ಕುಟುಂಬ ಸದಸ್ಯರ ವಿವರ, ಆರೋಗ್ಯ ಪರಿಸ್ಥಿತಿ, ಮನೆ ವಿಳಾಸ ಸೇರಿದಂತೆ ಪೂರ್ಣ ಮಾಹಿತಿಯನ್ನು ಪಡೆದು ಸಂಗ್ರಹಿಸಿಡಲಾಗುತ್ತದೆ.

ನೋಂದಣಿ ನಂತರ ಕುಟುಂಬಕ್ಕೆ 4 ಸಂಖ್ಯೆಗಳ ಕೋಡ್ ನೀಡಲಾಗುವುದು. ತುರ್ತು ಸಮಯದಲ್ಲಿ ಕರೆ ಮಾಡಿದಾಗ ಕೋಡ್ ತಿಳಿಸಿದರೆ ಆ ಮಾಹಿತಿ ಆಧರಿಸಿ ಬೀಸ್ಟ್ ಸಿಬ್ಬಂದಿ ಮನೆಗೆ ಬರುತ್ತಾರೆ. ರೋಗಿಯ ಮನೆಗೆ ಬಂದು ಪ್ರಾಥಮಿಕ ಚಿಕಿತ್ಸೆ ನೀಡಿದರೆ ರು.2,500 ಶುಲ್ಕ ವಿಧಿಸಲಾಗುತ್ತದೆ. ದ್ವಿಚಕ್ರ ವಾಹನದೊಂದಿಗೆ ಆಸ್ಪತ್ರೆಯ ಆಂಬ್ಯುಲೆನ್ಸ್ ಕೂಡಾ ಕಳುಹಿಸಿಕೊಡಲಾಗುತ್ತದೆ ಎಂದು ಬೀಸ್ಟ್ ಮೆಡಿಕಲ್ ನಿರ್ದೇಶಕ ಡಾ.ಪ್ರದೀಪ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com