ಜೂನ್ 21ರಿಂದ ಮಧಮೇಹ ನಿವಾರಣೆಗೆ ವಿಶೇಷ ಯೋಗ ಶಿಬಿರ

ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಮತ್ತು ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಧುಮೇಹ ಮುಕ್ತ ಭಾರತ ಯೋಗ ಶಿಬಿರವನ್ನು...
ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಅಧ್ಯಕ್ಷ ಪುಟ್ಟೇಗೌಡ ಮತ್ತಿತರರು.
ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಅಧ್ಯಕ್ಷ ಪುಟ್ಟೇಗೌಡ ಮತ್ತಿತರರು.

ಬೆಂಗಳೂರು: ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಮತ್ತು ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಧುಮೇಹ ಮುಕ್ತ ಭಾರತ ಯೋಗ ಶಿಬಿರವನ್ನು ಜೂನ್ 21ರಿಂದ 27ರವರೆಗೆ ಹಮ್ಮಿಕೊಳ್ಳಲಾಗಿದೆ.

ಮಧುಮೇಹದಿಂದ ಮುಕ್ತರಾಗಲು ರಾಷ್ಟ್ರವ್ಯಾಪಿ ಈ ಯೋಗ ಶಿಬಿರ ಆಯೋಜಿಸಿದ್ದು, ಬೆಂಗಳೂರಿನ ಬನಶಂಕರಿಯಲ್ಲಿರುವ ಪಿಇಎಸ್ ಕಾಲೇಜ್ ಆವರಣದಲ್ಲಿ ನಡೆಯಲಿದೆ. 2000ಕ್ಕಿಂತ ಹೆಚ್ಚು ಯೋಗಸಪ್ತಾಹ ಶಿಬಿರಗಳು ರಾಷ್ಟ್ರಾದ್ಯಂತ 671 ಜಿಲ್ಲೆಗಳಲ್ಲಿ ನಡೆಯಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಅಧ್ಯಕ್ಷ ಪುಟ್ಟೇಗೌಡ ತಿಳಿಸಿದ್ದಾರೆ.

ಈ ಶಿಬಿರದಲ್ಲಿ ಮಧಮೇಹ ಸಮಸ್ಯೆಯಿಂದ ಈಗಾಗಲೇ ಔಷಧಿ ತೆಗೆದುಕೊಳ್ಳುತ್ತಿರುವವರು, ಮಧುಮೇಹ ರೋಗ ಬರುವ ಮುನ್ಸೂಚನೆ ಇರುವವರು, ಕೌಟುಂಬಿಕ ಹಿನ್ನೆಲೆಯಿಂದ ಮಧಮೇಹವನ್ನು ಹೊಂದಿರುವವರು ಹಾಗೂ ಸ್ಥೂಲಕಾಯದವರು ಭಾಗವಹಿಸಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com