ನಾಳೆ ಫ್ರೀಡಂ ಪಾರ್ಕ್ ನಲ್ಲಿ ಕಾಶ್ಮೀರ ಪಂಡಿತರ ಪ್ರತಿಭಟನೆ

ಕಾಶ್ಮೀರ ಕಣಿವೆ ನಮ್ಮ ಜನ್ಮಸ್ಥಳವಾಗಿದ್ದು ಅದನ್ನು ಬಿಟ್ಟುಕೊಡವಂತೆ ಒತ್ತಾಯಿಸಿ ನಾಳೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ...
ಪತ್ರಿಕಾಗೋಷ್ಠಿ ನಡೆಸಿದ ಕಾಶ್ಮೀರಿ ಹಿಂದೂ ಸಾಂಸ್ಕೃತಿಕ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಆರ್.ಕೆ.ಮಟ್ಟು ಮತ್ತಿತರರು
ಪತ್ರಿಕಾಗೋಷ್ಠಿ ನಡೆಸಿದ ಕಾಶ್ಮೀರಿ ಹಿಂದೂ ಸಾಂಸ್ಕೃತಿಕ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಆರ್.ಕೆ.ಮಟ್ಟು ಮತ್ತಿತರರು

ಬೆಂಗಳೂರು: ಕಾಶ್ಮೀರ ಕಣಿವೆ ನಮ್ಮ ಜನ್ಮಸ್ಥಳವಾಗಿದ್ದು ಅದನ್ನು ಬಿಟ್ಟುಕೊಡವಂತೆ ಒತ್ತಾಯಿಸಿ ನಾಳೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಶ್ಮೀರಿ ಹಿಂದೂ ಸಾಂಸ್ಕೃತಿಕ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಆರ್.ಕೆ.ಮಟ್ಟು ತಿಳಿಸಿದ್ದಾರೆ.

ಕಾಶ್ಮೀರದ ಪಂಡಿತರು ತಲೆತಲಾಂತರಗಳಿಂದ ಕಾಶ್ಮೀರ ಕಣಿವೆಯಲ್ಲಿ ಬೇರು ಬಿಟ್ಟಿದ್ದವರು, ಈಗ ದೇಶದ ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿದ್ದೇವೆ. ಬೆಂಗಳೂರಿನಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. 1990ರಲ್ಲಿ ಕಾಶ್ಮೀರ ಪಂಡಿತರ ಮೇಲೆ ಉಗ್ರರು ದಾಳಿ ನಡೆಸಿದರು. ಇದರಿಂದ ನಮ್ಮ ಎಲ್ಲಾ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ದೇಶದ ವಿವಿಧ  ಪ್ರದೇಶಗಳಲ್ಲಿ ನಿರ್ಗತಿಕರಾಗಿ ವಾಸಿಸುತ್ತಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನಮ್ಮ ಮೇಲೆ ದಾಳಿ ಮಾಡಿದವರ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ನಮಗೆ ವಸತಿ ಕಲ್ಪಿಸುತ್ತೇವೆ ಎಂದು ಹೇಳತ್ತಾ ಬಂದಿದೆ ಹೊರತು ಈ ವರೆಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ನಮ್ಮ ಮೇಲೆ ದಾಳಿ ನಡೆಸಿದ ಉಗ್ರರನ್ನು ಸದೆಬಡಿಯಬೇಕು. ನಮಗೆ ನಮ್ಮ ಜಾಗವನ್ನು ಬಿಟ್ಟುಕೊಡಬೇಕು ಹಾಗೂ ಎಂದ ಅವರು, ಕಾಶ್ಮೀರಕ್ಕೆ ಪ್ರತ್ಯೇಕ ಕಾಯ್ದೆ ಅಗತ್ಯವಿಲ್ಲ. ದೇಶದ ಸಂವಿಧಾನವೂ ಅಲ್ಲಿಗೆ ಅನ್ವಯಿಸಬೇಕು ಹಾಗೂ ನಮ್ಮ ಮೇಲೆ ದಾಳಿ ನಡೆಸಿದ ಉಗ್ರರನ್ನು ಸದೆ ಬಡಿದು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿಭಟನೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಿಗೆ ನಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com