
ಬೆಂಗಳೂರು: ಆರು ಮಂದಿ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಪ್ರಮುಖ ಬೆಳವಣೆಗೆಯೊಂದರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಆರು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆ ಉಪ ಆಯಕ್ತರಾಗಿ ಅಭಿಷೇಕ್ ಗೋಯಲ್, ಲೋಕಾಯುಕ್ತ ಎಸ್ಪಿ (ವಿಶೇಷ ತನಿಖಾ ದಳ)ಯಾಗಿ ಕೌಶಲೇಂದ್ರ ಕುಮಾರ್ ಅವರನ್ನು ವರ್ಗಾವಣೆ ಮಾಡಿದೆ.
ಇನ್ನು ಹಾಸನ ಎಸ್ಪಿಯಾಗಿ ರಮಣ್ ಗುಪ್ತ , ಶಿವಮೊಗ್ಗ ಎಸ್ಪಿಯಾಗಿ ರವಿ ಚನ್ನಣ್ಣನವರ್, ತುಮಕೂರು ಎಸ್ಪಿಯಾಗಿ ಕಾರ್ತಿಕ್ ರೆಡ್ಡಿ ಹಾಗೂ ಬೆಂಗಳೂರು ನಗರ ಉಪ ಪೊಲೀಸ್ ಆಯುಕ್ತ (ಅಪರಾಧ)ರಾಗಿ ಆರ್.ರಮೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಪಾಟೀಲ್ ವಿನಾಯಕ್ ವಸಂತ್ ರಾವ್ ಅವರಿಗೆ ಬಡ್ತಿ ನೀಡಿ, ಮೈಸೂರು ನಗರ ಉಪ ಪೊಲೀಸ್ ಆಯುಕ್ತರನ್ನಾಗಿ (ಕಾನೂನು ಸುವ್ಯವಸ್ಥೆ ) ನೇಮಕ ಮಾಡಲಾಗಿದೆ.
Advertisement