ಹುಲಿ ಚರ್ಮ ಮಾರಾಟ ಯತ್ನ: ಇಬ್ಬರ ಸೆರೆ

ಹುಲಿ ಚರ್ಮ ಮಾರಾಟಕ್ಕೆ ಯತ್ನಿಸಿದ ಪಿಎಚ್‌ಡಿ ಪದವೀಧರ ಸೇರಿ ಇಬ್ಬರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ...
ಹುಲಿ ಚರ್ಮ(ಸಾಂದರ್ಭಿಕ ಚಿತ್ರ)
ಹುಲಿ ಚರ್ಮ(ಸಾಂದರ್ಭಿಕ ಚಿತ್ರ)

ಬೆಂಗಳೂರು: ಹುಲಿ ಚರ್ಮ ಮಾರಾಟಕ್ಕೆ ಯತ್ನಿಸಿದ ಪಿಎಚ್‌ಡಿ ಪದವೀಧರ ಸೇರಿ ಇಬ್ಬರನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ಆರ್‌ಎಂವಿ ಬಡವಾಣೆ ನಿವಾಸಿ ಜಗದೀಶ್(37) ಹಾಗೂ ಮೈಸೂರಿನ ಡಾ.ಇಫ್ತಿಕರ್(58) ಬಂಧಿತರು. ಆರೋಪಿಗಳು ಸಿಟಿ ಮಾರುಕಟ್ಟೆ ಲಾಡ್ಜ್‌ವೊಂದರಲ್ಲಿ ರು.50 ಲಕ್ಷಕ್ಕೆ ಹುಲಿ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಬಂಧಿಸಲಾಯಿತೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆರೋಪಿ ಇಫ್ತಿಕರ್ ಪಿಎಚ್‌ಡಿ ಪದವಿ ಪಡೆದಿದ್ದಾನೆ. ಮತ್ತೊಬ್ಬ ಆರೋಪಿ ಜಗದೀಶ್, ಗ್ರಾನೈಟ್ ವ್ಯವಹಾರ ಮಾಡುತ್ತಾನೆ. ಹುಲಿ ಚರ್ಮ ಹಲವು ವರ್ಷಗಳಿಂದ ತನ್ನ ಮನೆಯಲ್ಲಿತ್ತು. ಹಣದ ಅಗತ್ಯವಿದ್ದ ಕಾರಣ ಮಾರಾಟಕ್ಕೆ ಯತ್ನಿಸಿದ್ದಾಗಿ ಇಫ್ತಿಕರ್ ಹೇಳಿದ್ದಾನೆ. ಆದರೆ, ಈ ಸಂಬಂಧ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com