ಆಫ್ರಿಕಾ ಪ್ರಜೆಯಿಂದ ಪೊಲೀಸರ ಮೇಲೆ ಹಲ್ಲೆ

ಸ್ಥಳೀಯರು ಹಾಗೂ ಆಫ್ರಿಕನ್ನರ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ, ಹಣ ಡಬ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಥಳೀಯರು ಹಾಗೂ ಆಫ್ರಿಕನ್ನರ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ, ಹಣ ಡಬ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ.

ಪ್ರವಾಸಿ ವೀಸಾ ಮೇಲೆ ಭಾರತಕ್ಕೆ ಬಂದಿದ್ದ ಘಾನಾ ಮೂಲದ ಆ್ಯಡಮ್ಸ್ ಡಾರ್ಮೈಗ್ (45) ನನ್ನು ಹಲ್ಲೆ ಹಾಗೂ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಮ್ಮನಹಳ್ಳಿಯಲ್ಲಿರುವ ಲಾಡ್ಜ್‍ವೊಂದರಲ್ಲಿ ಆರೋಪಿ ಉಳಿದುಕೊಂಡಿದ್ದ.

ನಗರದಲ್ಲಿ ಹಣ ಡಬ್ಲಿಂಗ್ ದಂಧೆಯಲ್ಲಿ ಆ್ಯಡಮ್ಸ್ ತೊಡಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಆಂತರಿಕ ಭದ್ರತಾ ದಳದ ಅಧಿಕಾರಿಗಳು ಫೋನ್ ನಂಬರ್ ಆಧಾರದ ಮೇಲೆ ಆರೋಪಿಯ ಸ್ಥಳ ಪತ್ತೆ  ಮಾಡಿದ್ದರು. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಕಮ್ಮನಹಳ್ಳಿಯಲ್ಲಿರುವ ಕೆಎಫ್ ಸಿಯಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಇತ್ತು. ಹೀಗಾಗಿ, ಬಾಣಸವಾಡಿ ಪೊಲೀಸರು ನೆರವಿನೊಂದಿಗೆ ಆರೋಪಿಯ ಬಂಧನಕ್ಕೆ ಮಫ್ತಿಯಲ್ಲಿ ಪೊಲೀಸರು ತೆರಳಿದ್ದರು. ಹೋಟೆಲ್ ನಲ್ಲೇ ಆತನನ್ನು ಪ್ರಶ್ನಿಸಲು ಆರಂಭಿಸಿದರು.

ಈ ವೇಳೆ ಕುಪಿತಗೊಂಡ ಆ್ಯಡಮ್ಸ್, ಕುರ್ಚಿ ಎತ್ತಿ ಕಾನ್ಸ್ ಟೇಬಲ್ ಶಿವಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹೀಗಾಗಿ, ಪೊಲೀಸರು ಬಲ ಪ್ರಯೋಗಿಸಿ ಆತನನ್ನು ಬಂಧಿಸಿದ್ದಾರೆ. ತಲೆಗೆ ಪೆಟ್ಟಾಗಿದ್ದ ಶಿವಕುಮಾರ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com