ಪ್ರಭಾ ಪಾರ್ಥಿವ ಶರೀರ ನಗರಕ್ಕೆ

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೊಲೆಯಾದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಪ್ರಭಾ (41) ಅವರ ಪಾರ್ಥಿವ ಶರೀರವನ್ನು ಪತಿ ಅರುಣ್‍ಕುಮಾರ್ ಹಾಗೂ ಸೋದರ ಶಂಕರ್‍ಶೆಟ್ಟಿ ಅವರು ಶನಿವಾರ ರಾತ್ರಿ ನಗರಕ್ಕೆ ತಂದರು...
ಪ್ರಭಾ ಅರುಣ್‍ಕುಮಾರ್
ಪ್ರಭಾ ಅರುಣ್‍ಕುಮಾರ್
Updated on

ಬೆಂಗಳೂರು: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೊಲೆಯಾದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಪ್ರಭಾ (41) ಅವರ ಪಾರ್ಥಿವ ಶರೀರವನ್ನು ಪತಿ ಅರುಣ್‍ಕುಮಾರ್ ಹಾಗೂ ಸೋದರ ಶಂಕರ್‍ಶೆಟ್ಟಿ ಅವರು ಶನಿವಾರ ರಾತ್ರಿ ನಗರಕ್ಕೆ ತಂದರು.

ವಿಮಾನ ನಿಲ್ದಾಣದಿಂದ ಚಂದ್ರಾಲೇಔಟ್‍ನಲ್ಲಿರುವ ಪತಿಯ ನಿವಾಸಕ್ಕೆ ಪ್ರಭಾ ಅವರ ಮೃತದೇಹವನ್ನು ಶನಿವಾರ ರಾತ್ರಿ 10.30ಕ್ಕೆ ಕೊಂಡೊಯ್ಯಲಾಯಿತು. ಭಾನುವಾರ ಬೆಳಗ್ಗೆ ಎರಡ್ಮೂರು ತಾಸು ಸಂಬಂಧಿಕರ ದರ್ಶನಕ್ಕೆ ಶವ ಇರಿಸಿ ಬಳಿಕ ಮಂಗಳೂರಿಗೆ ಕೊಂಡೊಯ್ಯ ಲಾಗುತ್ತದೆ ಎಂದು ಸಂಬಂಧಿ ತ್ರಿಜೇಶ್ ಹೇಳಿದ್ದಾರೆ.

ಪ್ರಭಾ ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ಆಹಾರ ಖಾತೆ ಸಚಿವ ದಿನೇಶ್ ಗುಂಡುರಾವ್ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ಬಿಜೆಪಿ ಹಿರಿಯ ಮುಖಂಡ, ಸಂಸದ ಅನಂತ್ ಕುಮಾರ್ ಸೇರಿದಂತೆ ಮತ್ತಿತರ ಗಣ್ಯಾತಿಗಣ್ಯರು ಸ್ಥಳಕ್ಕೆ ತೆರಳಿ ಪ್ರಭಾ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಮೈಂಡ್‍ಟ್ರಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪ್ರಭಾ ಅವರು ಮಾ.7ರಂದು ರಾತ್ರಿ 9.30ರ ಸುಮಾರಿಗೆ ಸಿಡ್ನಿಯಲ್ಲಿರುವ ತಮ್ಮ ಮನೆ ಸಮೀಪದ ಪಾರ್ಕ್‍ನಲ್ಲಿ ದುಷ್ಕರ್ಮಿಗಳಿಂದ ಕೊಲೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com