ನಗರದಲ್ಲಿ ಹೆಚ್ಚುತ್ತಿರುವ ಅಪಘಾತ: 100 ಸಿಸಿಟಿವಿ ಅಳವಡಿಕೆಗೆ ಪೊಲೀಸ್ ಇಲಾಖೆ ನಿರ್ಧಾರ

ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರಾದ್ಯಂತ 100 ಸಿಸಿಟಿವಿ.....
ಎಂ.ಎ.ಸಲೀಂ
ಎಂ.ಎ.ಸಲೀಂ

ಬೆಂಗಳೂರು: ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರಾದ್ಯಂತ  100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಸುಮಾರು 7.57 ಕೋಟಿ ರೂಪಾಯ ಮೌಲ್ಯದ 100 ಸಿಸಿ ಕ್ಯಾಮೆರಾಗಳನ್ನು ಸಿಟಿಯ ಒಳಗೆ ಹಾಗೂ ಹೊರವಲಯದ ಪ್ರಮುಖ ಜಂಕ್ಷನ್, ಅಂದರೆ ಸತತವಾಗಿ ರಾತ್ರಿ ಹೊತ್ತು ಅಪಘಾತ ನಡೆಯುತ್ತಿರುವ ಪ್ರದೇಶಗಳಲ್ಲಿ, ವಾರಾಂತ್ಯದಲ್ಲಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ ಎಂದು ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ ಸಲೀಂ ತಿಳಿಸಿದ್ದಾರೆ.

ಸದ್ಯ ನಗರದ ಹಲವೆಡೆ 179 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ ಹಲವು ಪ್ರಮುಖ ಸ್ಥಳಗಳಲ್ಲಿ  ಇದುವರೆಗೂ ಕ್ಯಾಮೆರಾ ಅಳವಡಿಸಲಾಗಿರಲಿಲ್ಲ ಎಂದ ಅವರು, ಎಚ್ ಎಸ್ ಆರ್ ಲೇಔಟ್, ಬಾಗಲಕುಂಟೆ, ಚಿಕ್ಕಬಾಣಾವರ, ಮತ್ತು ವೈಟ್ ಫೀಲ್ಡ್ ಸೇರಿದಂತೆ ಪ್ರಮುಖ ಜಂಕ್ಷನ್ ಗಳಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು.

ಅಪಘಾತ, ಹಾಗೂ ಹಿಟ್ ಅಂಡ್ ರನ್ ನಂತ ಕೇಸ್ ಗಳು ನಡೆದಾಗ ಅರೋಪಿಗಳನ್ನು ಪತ್ತೆ ಹಚ್ಚಲು ಕ್ಚಾಮೆರಾ ಹೆಚ್ಚು ನೆರವಿಗೆ ಬರುತ್ತದೆ ಎಂದು ಅವರು ಹೇಳಿದರು.
ಕಳೆದ 5 ವರ್ಷಗಳ ಅವಧಿಯಲ್ಲಿ ನಡೆದ ಸುಮಾರು 494 ಅಪಘಾತ ಪ್ರಕರಕಣಗಳು ಇದುವರೆಗೂ ಬೆಗಹರಿದಿಲ್ಲ. ಅಪಘಾತ ಸಂಬಂಧ ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೇ ಪ್ರಕರಣ ಮುಚ್ಚಿ ಹೋಗುತ್ತದೆ ಎಂದು ಸಲೀಂ ಹೇಳಿದರು. ಹೀಗಾಗಿ ಹೆಚ್ಚುವರಿಯಾಗಿ 100 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com