
ಬೆಂಗಳೂರು: ಅಕ್ರಮ ಲಾಟರಿ ಮಾರಾಟ ದಂಧೆ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಕರ್ನಾಟಕದ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕದ ಎಎಪಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಮಾತನಾಡಿ, ಅಕ್ರಮ ಲಾಟರಿ ದಂಧೆ, ಮಟ್ಕಾ ದಂಧೆ ಹಾಗೂ ಬೆಟ್ಟಿಂಗ್ ದಂಧೆ ತನಿಖೆಯನ್ನು ಕೇವಲ ನೆಪ ಮಾತ್ರಕ್ಕೆ ನಡೆಸಲಾಗುತ್ತಿದೆ. ಸಿಐಡಿ ತನಿಖೆ ದಂಧೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಲ್ಲ ಎಂದು ಹೇಳಿದ್ದಾರೆ.
ಲಾಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಐಡಿ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಮಧ್ಯಂತರ ವರದಿಯಲ್ಲಿರುವ ಅಧಿಕಾರಿಗಳ ಹೆಸರನ್ನು ಏಕೆ ಬಹಿರಂಗಪಡಿಸಿಲ್ಲ. ಇಲ್ಲಿ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳ ರಕ್ಷಣೆಗೆ ನಿಂತಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿ ಜನರನ್ನು ವಂಚಿಸುತ್ತಿದೆ. ಸಿಐಡಿ ಪೊಲೀಸರಿಂದ ನಿಶ್ಪಕ್ಷಪಾತ ತನಿಖೆ ಸಾಧ್ಯವಿಲ್ಲ.
ಸಿಐಡಿ ಪೊಲೀಸರೇ ತನಿಖೆಯನ್ನು ಮುಂದುವರೆಸಿದರೇ, ಪೂರ್ಣ ತನಿಖಾ ವರದಿ ಬಹಿರಂಗವಾಗುವುದಿಲ್ಲ. ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧ ತನಿಖೆಯಾಗಬೇಕಾದರೆ, ತನಿಖೆಯನ್ನು ಸಿಬಿಐಗೆ ವಹಿಸಲೇಬೇಕು. ತನಿಖಾ ವರದಿಯನ್ನು ಬಹಿರಂಗಗೊಳಿಸಿ, ವರದಿಯಲ್ಲಿ ಹೆಸರಿಸಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Advertisement