ರು.26,500 ಕೋಟಿ ವೆಚ್ಚದಲ್ಲಿ ಇದೇ ತಿಂಗಳಲ್ಲಿ ನಡೆಯಲಿದೆ ಮೆಟ್ರೋ ಕಾಮಗಾರಿ

ಕಳೆದ ಎಂಟು ವರ್ಷದಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಮೊದಲ ಹಂತದ ಮೆಟ್ರೋ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು ಇದರ ಬೆನ್ನಲ್ಲೇ ಎರಡನೇ ಹಂತದ ಕಾಮಗಾರಿ ನವೆಂಬರ್‍ ನಿಂದ ಆರಂಭವಾಗಲಿದೆ.
ನಮ್ಮ ಮೆಟ್ರೋ ಯೋಜನೆ (ಸಂಗ್ರಹ ಚಿತ್ರ)
ನಮ್ಮ ಮೆಟ್ರೋ ಯೋಜನೆ (ಸಂಗ್ರಹ ಚಿತ್ರ)

ಬೆಂಗಳೂರು: ಕಳೆದ ಎಂಟು ವರ್ಷದಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಮೊದಲ ಹಂತದ ಮೆಟ್ರೋ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು ಇದರ ಬೆನ್ನಲ್ಲೇ ಎರಡನೇ ಹಂತದ ಕಾಮಗಾರಿ ನವೆಂಬರ್‍ ನಿಂದ ಆರಂಭವಾಗಲಿದೆ.

ಎರಡನೇ ಹಂತದ ಕಾಮಗಾರಿ ವೈಟ್ ಫೀಲ್ಡ್-ಕೆಂಗೇರಿ (34.3 ಕಿ.ಮೀ), ಆರ್.ವಿ. ರಸ್ತೆ-ಬೊಮ್ಮಸಂದ್ರ (18.8 ಕಿ.ಮೀ) ಹಾಗೂ ಗೊಟ್ಟಿಗೆರೆ-ನಾಗವಾರ ನಡುವೆ (21.2 ಕಿ.ಮೀ) ಕಾಮಗಾರಿ  ಆರಂಭವಾಗಬೇಕಿದೆ. ಸದ್ಯ 2ನೇ ಹಂತದ ಕಾಮಗಾರಿ ಮೊದಲು ಮೈಸೂರು ರಸ್ತೆಯಲ್ಲಿ ಆರಂಭವಾಗಲಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೂವರೆ ವರ್ಷದ ಹಿಂದೆಯೇ  ಶಂಕುಸ್ಥಾಪನೆ ನೆರವೇರಿಸಿದ್ದರು. ನಿರೀಕ್ಷೆಯಂತೆ ಮೈಸೂರು ರಸ್ತೆಯ ಜ್ಞಾನ ಭಾರತಿ ವಿವಿ ಬಳಿ 2ನೇ ಹಂತದ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದೆ. ಈ ಕಾಮಗಾರಿಗೆ ಈಗಾಗಲೇ ಭೂಮಿ  ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕೆಲವರಿಗೆ  ಪರಿಹಾರದ ಹಣ ಸಹ ನೀಡಲಾಗಿದೆ.

ರು. 26,500 ಕೋಟಿ ವೆಚ್ಚದ ಎರಡನೇ ಹಂತದ ಕಾಮಗಾರಿ ಇನ್ನು ಬೆರಳೆಣಿಕೆಯಷ್ಟು ದಿನದಲ್ಲಿ ತಡವಾಗಿಯಾದರೂ ಕಾಮಗಾರಿ ಆರಂಭವಾಗಲಿದೆ. ಹೊರಭಾಗದ ಸಾರ್ವಜನಿಕರು ಮೆಟ್ರೊ  ಕಾಮಗಾರಿಯ ಕಿರಿಕಿರಿ ಅನುಭವಿ ಸಲು ಸಿದಟಛಿರಾಗಬೇಕಿದೆ. 2016ರ ಮಾರ್ಚ್ ವೇಳೆಗೆ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ, ನವೆಂಬರ್‍ನಿಂದ 2ನೇ ಹಂತದ  ಕಾಮಗಾರಿಯನ್ನು ಬಿಎಂಆರ್ ಸಿಎಲ್ ಕೈಗೆತ್ತಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com