ನಿವೇಶನ ಹಂಚಿಕೆ ಕೊಡುಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯ ಸರ್ಕಾರ ಈ ಬಾರಿ ಬೆಂಗಳೂರಿನ ಜನತೆಗೆ ರಾಜ್ಯೋತ್ಸವ ಕೊಡುಗೆ ನೀಡುತ್ತಿದ್ದು, 12 ವರ್ಷಗಳ ನಂತರ ಬಿಡಿಎ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮ ಯ್ಯ ಹೆಮ್ಮೆಯಿಂದ ಹೇಳಿಕೊಂಡರು...
The Karnataka state government is all set to amend the guidelines for allotment of ‘G’ category sites by the Bengaluru  Development Authority (BDA).
The Karnataka state government is all set to amend the guidelines for allotment of ‘G’ category sites by the Bengaluru Development Authority (BDA).
Updated on

ಬೆಂಗಳೂರು: ರಾಜ್ಯ ಸರ್ಕಾರ ಈ ಬಾರಿ ಬೆಂಗಳೂರಿನ ಜನತೆಗೆ ರಾಜ್ಯೋತ್ಸವ ಕೊಡುಗೆ ನೀಡುತ್ತಿದ್ದು, 12 ವರ್ಷಗಳ ನಂತರ ಬಿಡಿಎ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂದು  ಮುಖ್ಯಮಂತ್ರಿ ಸಿದ್ದರಾಮ ಯ್ಯ ಹೆಮ್ಮೆಯಿಂದ ಹೇಳಿಕೊಂಡರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ನಿವೇಶನ  ಹಂಚಿಕೆ ಮಾಡಿ ಸುಮಾರು 12 ವರ್ಷಗಳೇ ಕಳೆದಿದ್ದವು ವಿವಿಧ ಕಾರಣಗಳಿಂದ ನಿವೇಶನ ಹಂಚಲು ಸಾಧ್ಯವಾಗಿರಲಿಲ್ಲ. ಈಗ ನಿವೇಶನ ಹಂಚುತ್ತಿದ್ದು, ಕೆಂಪೇಗೌಡ ಬಡಾವಣೆಯಲ್ಲಿ ಐದು ಸಾವಿರ  ನಿವೇಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದರು.

ಶಾಸಕರಿಗೆ ಜಿ.ಕೆಟಗಿರಿ ನಿವೇಶನ ನೀಡುವ ಸಂಬಂಧ ಬಿಡಿಎ ನಿಯಮಗಳಿಗೆ ತಿದ್ದುಪಡಿ ಕುರಿತು ಪ್ರತಿಕ್ರಿಯಿಸಿದ ಅವರು, ತಿದ್ದುಪಡಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಪ್ರಕ್ರಿಯೆ ಮುಗಿಸಲು  ಕಾನೂನು ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಆತ್ಮೀಯತೆಯಿಂದ ಉಭಯ ಕುಶಲೋಪರಿ: ಚಹಾಕೂಟಕ್ಕೆ ಆಗಮಿಸಿದ್ದ ಪ್ರಶಸ್ತಿ ಪುರಸ್ಕೃತರ ಬಳಿ ತೆರಳಿದ ಸಿಎಂ ಸಿದ್ರಾಮಯ್ಯ ಆತ್ಮೀಯತೆಯಿಂದ ಕುಶಲೋಪರಿ ವಿಚಾರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com