ಚಾಕು ಜತೆ ಸಿಎಂ ಮನೆ ಪ್ರವೇಶಿಸಿದವನ ಬಂಧನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ `ಕಾವೇರಿ'ಗೆ ತುಕ್ಕು ಹಿಡಿದ ಚಾಕುವಿನೊಂದಿಗೆ ಬಂದಿದ್ದ ಲಿಂಗರಾಜು (54) ಎಂಬಾತನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ `ಕಾವೇರಿ'ಗೆ ತುಕ್ಕು ಹಿಡಿದ ಚಾಕುವಿನೊಂದಿಗೆ ಬಂದಿದ್ದ ಲಿಂಗರಾಜು (54) ಎಂಬಾತನನ್ನು ಹೈಗ್ರೌಂಡ್ಸ್ ಠಾಣೆ
ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಲಿಂಗರಾಜು, ಸೋಮವಾರ ಬೆಳಗ್ಗೆ 9 ಗಂಟೆಗೆ ತನ್ನ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಕೇಳಲು ಸಿಎಂಗೆ ಮನವಿ ಸಲ್ಲಿಸಬೇಕೆಂದು ಕಾವೇರಿಗೆ
ಬಂದು ಬ್ಯಾಗ್ ಅನ್ನು ಪ್ರವೇಶ ದ್ವಾರದಲ್ಲಿ ಇಟ್ಟು ಒಳಗೆ ಹೋಗಿದ್ದ. ಈ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೆಹಲಿಗೆ ಹೋಗುವ ಸಿದಟಛಿತೆಯಲ್ಲಿದ್ದರು. ಆದರೆ, ಆತನಿಗೆ ಸಿಎಂ ಭೇಟಿ ಸಾಧ್ಯವಾಗಿರಲಿಲ್ಲ. ಹೀಗಾಗಿ, ವಾಪಸ್ ಹೋಗುವಾಗ ಆತನ ಬ್ಯಾಗ್‍ನಲ್ಲಿ ಚಾಕು ಇರುವುದು ಕಂಡುಬಂದ ಕಾರಣ ಪೊಲೀಸರು, ತಕ್ಷಣ ವಶಕ್ಕೆ ಪಡೆದು ಹೈಗ್ರೌಂಡ್ಸ್ ಠಾಣೆಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಲಿಂಗರಾಜು, ಹಣ್ಣು ಕತ್ತರಿಸಲು ಚಾಕು ಇಟ್ಟುಕೊಂಡಿ ದ್ದೇನೆ.

ತಾನು ಸಬ್ ಇನ್ಸ್‍ಪೆಕ್ಟರ್, ಇನ್ಸ್‍ಪೆಕ್ಟರ್ ಎಂದು ಹೇಳುತ್ತಿದ್ದ. ಸಿದ್ದರಾಮಯ್ಯ ಅವರೊಂದಿಗೆ ಚೀನಾಗೆ ಹೋಗಿ ಬಂದಿದ್ದೆ. ಸಿಎಂ ನನಗೆ ಆಪ್ತರು. ಕೆಲ ದಿನಗಳ ಹಿಂದೆ ಹೆಲಿಕಾಪ್ಟರ್‍ನಲ್ಲಿ ಸಿಎಂ ನನ್ನನ್ನು ಕಿಡ್ನ್ಯಾಪ್ ಮಾಡಿ ಮಲೇಮಹದೇಶ್ವರ ಬೆಟ್ಟದಲ್ಲಿ ಬೀಳಿಸಿದ್ದರು. ಅದರಿಂದ ಕಾಲಿಗೆ ಗಾಯವಾಗಿದೆ ಎಂದು ಅಸಂಬದಟಛಿವಾದ ಹೇಳಿಕೆ ನೀಡುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಲಿಂಗರಾಜು ಮಾನಸಿಕ ಅಸ್ವಸ್ಥನಂತೆ ಕಂಡುಬಂದು ಅಸಂಬದಟಛಿ ಹೇಳಿಕೆ ನೀಡುತ್ತಿದ್ದ ಕಾರಣ ಅನುಮಾನಗೊಂಡು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ವೈದ್ಯರು, ಆತ ಮಾನಸಿಕವಾಗಿ ಅಸ್ವಸ್ಥ ಎಂದು ವರದಿ ಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಆತನನ್ನು ಮಾನಸಿಕ ಆರೋಗ್ಯ ಕಾಯ್ದೆಯಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಲಿಂಗರಾಜು ಕುಟುಂಬದ ವಿಚಾರಣೆ ನಡೆಸಿ ಆತನ ಬಗ್ಗೆ ಮಾಹಿತಿ ನೀಡುವಂತೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೋರಲಾಯಿತು ಎಂದು ಡಿಸಿಪಿ
ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com