ನಿಯಮ ಉಲ್ಲಂಘಿಸಿ ಪ್ರಯಾಣಿಕರ ಕರೆದೊಯ್ಯುತ್ತಿದ್ದ ಕಾಲ್‍ಸೆಂಟರ್ 50 ವಾಹನಗಳ ವಶ

ರಹದಾರಿ ನಿಯಮ ಉಲ್ಲಂಘಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸುಮಾರು 50 ಕಾಲ್ ಸೆಂಟರ್ ವಾಹನಗಳನ್ನು ಆರ್ ಟಿ ಒ ಮತ್ತು ಬಿಎಂಟಿಸಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಹದಾರಿ ನಿಯಮ ಉಲ್ಲಂಘಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸುಮಾರು 50 ಕಾಲ್ ಸೆಂಟರ್ ವಾಹನಗಳನ್ನು ಆರ್ ಟಿ ಒ ಮತ್ತು ಬಿಎಂಟಿಸಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ವಶ ಪಡಿಸಿಕೊಳ್ಳಲಾಗಿದೆ.

ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರ ನೇತೃತ್ವದ ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆಯಿತು. ಮೋಟಾರು ವಾಹನ ನಿರೀಕ್ಷಕಿ ರಂಜಿತ ಹಾಗೂ ಹಿರಿಯ ಮೋಟಾರು ವಾಹನ ನಿರೀಕ್ಷಕ ಎಂ.ವೇಣುಗೋಪಾಲ ರೆಡ್ಡಿ ಅವರ ತಂಡ, 2 ದಿನಗಳ ಕಾರ್ಯಾಚರಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಕಾಲ್‍ಸೆಂಟರ್ ವಾಹನಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮೋಟಾರು ನಿರೀಕ್ಷಕ ವೇಣುಗೋಪಾಲ ರೆಡ್ಡಿ, ಬಿಎಂಟಿಸಿ , ಸಾರಿಗೆ ವಾಹನಗಳು ಪರವಾನಗಿ ಪಡೆದ ಖಾಸಗಿ ವಾಹನಗಳಲ್ಲಿ ಮಾತ್ರ ಪ್ರಯಾಣಿಸಬೇಕು. ಆತರುದಲ್ಲಿ ಸಿಕ್ಕ ವಾಹನದಲ್ಲಿ ಸಂಚರಿಸುವುದಗು ಅಪಾಯಕಾರಿಯಾಗಿದೆ. ಪರವಾನಗಿ ಪಡೆಯದೇ ಪ್ರಯಾಣಿಕರನ್ನು ಕರೆದೊಯ್ಯುವ ಎಲ್ಲಾ ವಾಹನಗಳ  ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
 
ಆದಾಯ ಹೆಚ್ಚಳ
ಕಾಲ್‍ಸೆಂಟರ್ ವಾಹನಗಳಿಗೆ ನಿಯಂತ್ರಣ ಹೇರಿದ ಮೊದಲ ದಿನವೇ ಬಿಎಂಟಿಸಿಗೆ ಲಾಭದಲ್ಲಿ  ರೂ. 1.5 ಕೋಟಿ, ಅಂದರೆ ಶೇ.3 ರಷ್ಟು ಹೆಚ್ಚಳವಾಗಿದೆ. ಕೆ.ಆರ್.ಪುರ ಡಿಪೋ ನಂಬರ್ 29ಕ್ಕೆ ಶೇ.2.26 ರಷ್ಟು ಆದಾಯ ಹೆಚ್ಚಳವಾಗಿದ್ದು,ರೂ. 55,000 ಹೆಚ್ಚುವರಿ ಆದಾಯ ಸಂಗ್ರಹವಾಗಿದೆ ಎಂದು ಘಟಕದ ವ್ಯವಸ್ಥಾಪಕ ಎಂ.ಸಿ.ಮುನಿಕೃಷ್ಣಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com