ಅಮಲಿನಲ್ಲಿ ಮಿತ್ರನ ಕೊಲೆ

ಮದ್ಯದ ಅಮಲಿನಲ್ಲಿ ಉಂಟಾದ ಜಗಳದಲ್ಲಿ ಸ್ನೇಹಿತನ ಕೊಲೆ ಮಾಡಿ ಅಸ್ಸಾಂಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಸಿಟಿ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮದ್ಯದ ಅಮಲಿನಲ್ಲಿ ಉಂಟಾದ ಜಗಳದಲ್ಲಿ ಸ್ನೇಹಿತನ ಕೊಲೆ ಮಾಡಿ ಅಸ್ಸಾಂಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಸಿಟಿ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅಖ್ತರ್ ಉಸೇನ್ (29) ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತ ನದೀಂ ಮಹಮದ್ (19) ಬಂಧಿತ. ಅಖ್ತರ್ ಮತ್ತು ನದೀಂ ಇಬ್ಬರೂ ಅಸ್ಸಾಂ ಮೂಲದವರು, ಕೆಂಪಾಪುರ ಅಗ್ರಹಾರದ
1ನೇ ಮುಖ್ಯರಸ್ತೆಯಲ್ಲಿ ವಾಸವಿದ್ದು. ಅಖ್ತರ್ ಕುರುಕಲು ತಿನಿಸು ತಯಾರಿಸುವ ಘಟಕದ ಉದ್ಯೋಗಿ. ನದೀಂ ಸೆಕ್ಯುರಿಟಿ ಗಾರ್ಡ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನ.11ರ ರಾತ್ರಿ ಇಬ್ಬರೂ ಮನೆಯಲ್ಲೇ ಮದ್ಯಪಾನ ಮಾಡಿದ್ದರು. ನಶೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದಾರೆ. ಈ ವೇಳೆ ಕುಕ್ಕರ್ ಮುಚ್ಚಳದಿಂದ ಅಖ್ತರ್‍ನ ತಲೆಗೆ ನದೀಂ ಹೊಡೆದು ಪರಾರಿಯಾಗಿದ್ದ. ಮರುದಿನ ಬೆಳಗ್ಗೆ ನದೀಂನ ಸ್ನೇಹಿತ ಮಂಜುನಾಥ್ ಎಂಬಾತ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ರಕ್ತದ ಮಡುವಲ್ಲಿ ಬಿದ್ದು ಒದ್ದಾಡುತ್ತಿದ್ದ ಅಖ್ತರ್‍ನನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿತ್ತಾದರೂ ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಚಿಕಿತ್ಸೆ ಫಲಿಸದೆ ಶುಕ್ರವಾರ ನಸುಕಿನಲ್ಲಿ ಮೃತಪಟ್ಟಿದ್ದಾನೆ. ವಿಷಯ ತಿಳಿದ ನದೀಂ ಭಯದಿಂದ ಅಸ್ಸಾಂಗೆ ಪರಾರಿಯಾಗಲು ಮುಂದಾಗಿದ್ದ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸಿಟಿ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com