ಮುಖ್ಯಮಂತ್ರಿ ಪದಕ ಪಡೆದಿದ್ದ ಹೆಡ್ ಕಾನ್‍ಸ್ಟೆಬಲ್ ಆತ್ಮಹತ್ಯೆ

ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆ ಹೆಡ್ ಕಾನ್‍ಸ್ಟೆಬಲ್ ಆರ್.ಪ್ರಕಾಶ್ (42) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶ್ರೀನಗರ ಸಮೀಪದ ಬೃಂದಾವನ ನಗರದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆ ಹೆಡ್ ಕಾನ್‍ಸ್ಟೆಬಲ್ ಆರ್.ಪ್ರಕಾಶ್ (42) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶ್ರೀನಗರ ಸಮೀಪದ
ಬೃಂದಾವನ ನಗರದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಭಾನುವಾರ ಕರ್ತವ್ಯಕ್ಕೆ ಹಾಜರಾಗಿದ್ದ ಪ್ರಕಾಶ್, ರಾತ್ರಿ 8 ಗಂಟೆಗೆ ಠಾಣೆಯಿಂದ ಮನೆಗೆ ಮರಳಿದ್ದರು. ಕುಟುಂಬ ಸದಸ್ಯರ ಜತೆ ಊಟ ಮುಗಿಸಿ, 11 ಗಂಟೆಗೆ ಮಲಗಿದ್ದರು. ಪತ್ನಿ-ಮಗು ನಿದ್ರೆಗೆ ಮಾಡುತ್ತಿದ್ದಾಗ ಎಚ್ಚರಗೊಂಡ ಪ್ರಕಾಶ್, ಮತ್ತೊಂದು ಕೊಠಡಿಗೆ ತೆರಳಿ ನೇಣು ಹಾಕಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಬೆಳಗ್ಗೆ ಎಚ್ಚರಗೊಂಡ ಪತ್ನಿ ಗಾಯಿತ್ರಿ, ಕೊಠಡಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಪಕ್ಕದ ಮನೆಯಲ್ಲಿಯೇ ನೆಲೆಸಿರುವ ಅತ್ತೆ-ಮಾವ, ಸೊಸೆಯ ಕಿರುಚಾಟ ಕೇಳಿ ಸ್ಥಳಕ್ಕೆ ಬಂದಿದ್ದಾರೆ.

1996ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಪ್ರಕಾಶ್, ಸಿಸಿಬಿ ಹಾಗೂ ವಿಜಯನಗರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮೂರು ವರ್ಷಗಳ ಹಿಂದೆ ಸಿಟಿ ಮಾರುಕಟ್ಟೆ ಠಾಣೆಗೆ ವರ್ಗವಾಗಿದ್ದರು. 15 ವರ್ಷಗಳ ಹಿಂದೆ ವಿವಾಹವಾಗಿದ್ದ ಇವರಿಗೆ ಒಂದು ವರ್ಷದ ಹೆಣ್ಣು ಮಗುವಿದೆ.

ಮುಖಮಂತ್ರಿ ಪದಕ ವಿಜೇತ: ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯಾಗಿದ್ದ ಪ್ರಕಾಶ್, ಹಲವು ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ವಾರದ ಹಿಂದಷ್ಟೇ ಹಾಸನ ಮೂಲದ ಕುಖ್ಯಾತ ಕಳ್ಳರನ್ನು ಬಂಧಿಸಿ, 32 ಬೈಕ್‍ಗಳನ್ನು ಜಪ್ತಿ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಪ್ರಮುಖ ಸುಳಿವನ್ನು ಪ್ರಕಾಶ್ ತಂದಿದ್ದರು ಎಂದು ಹಿರಿಯ ಅಧಿಕಾರಿಗಳು ಸ್ಮರಿಸಿದರು.

ಸಿಸಿಬಿಯಲ್ಲಿದ್ದಾಗ ಉತ್ತಮ ಕೆಲಸಕ್ಕಾಗಿ 2013ರಲ್ಲಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿತ್ತು ಎಂದು ಅಧಿಕಾರಿ ಹೇಳಿದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com