ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ಆರಂಭ

ಸಾರಿಗೇತರ ಲಘು ಮೋಟಾರ್ ವಾಹನಗಳಿಗೆ ನೋಂದಣಿ ಸಂಖ್ಯೆ ಪಡೆಯಲು ಮುಂಗಡ ಕಾಯ್ದಿರಿಸುವ ಮೂಲಕ ತಮಗೆ ಬೇಕಾದ (ಫ್ಯಾನ್ಸಿ) ಸಂಖ್ಯೆಗಳನ್ನು ನ.17ರ ಮಂಗಳವಾರ ಬಹಿರಂಗ ಹರಾಜಿನಲ್ಲಿ ಪಡೆಯಬಹುದಾಗಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಾರಿಗೇತರ ಲಘು ಮೋಟಾರ್ ವಾಹನಗಳಿಗೆ ನೋಂದಣಿ ಸಂಖ್ಯೆ ಪಡೆಯಲು ಮುಂಗಡ ಕಾಯ್ದಿರಿಸುವ ಮೂಲಕ ತಮಗೆ ಬೇಕಾದ (ಫ್ಯಾನ್ಸಿ) ಸಂಖ್ಯೆಗಳನ್ನು ನ.17ರ ಮಂಗಳವಾರ ಬಹಿರಂಗ ಹರಾಜಿನಲ್ಲಿ ಪಡೆಯಬಹುದಾಗಿದೆ.

ಸಂಖ್ಯೆಗಳನ್ನು ಬಹಿರಂಗ ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು. ಸಾರಿಗೇತರ ವಾಹನಗಳಾದ ಕಾರು, ಜೀಪು ಮತ್ತು ಸ್ವಂತ ಉಪಯೋಗದ ವಾಹನಗಳಿಗೆ ಈ ಸಂಖ್ಯೆಯನ್ನು ನೀಡಲಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಉಪ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಪ್ರಾರಂಬಿsಸಲಾಗುವ (ಕೆಎ-03/ಎಂವೈ) ಮುಂಗಡ ಆಯ್ಕೆ ನೋಂದಣಿ ಸಂಖ್ಯೆಗಳನ್ನು ಶಾಂತಿನಗರದ ಕೆ.ಎಚ್. ರಸ್ತೆಯಲ್ಲಿರುವ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಬಹಿರಂಗ ಹರಾಜು ಮೂಲಕ ಸಂಖ್ಯೆಗಳನ್ನು ಪಡೆಯಬಹುದು.

ಆಸಕ್ತರು ಕಾರ್ಯದರ್ಶಿ ರಾಜ್ಯ ಸಾರಿಗೆ ಪ್ರಾಧಿಕಾರ, ಬೆಂಗಳೂರು ಇವರ ಹೆಸರಿನಲ್ಲಿ ರು.75 ಸಾವಿರ ಡಿಡಿಯನ್ನು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ಒಳಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ www.rto.kar.nic.in ಇಲ್ಲವೆ ದೂ.080-22232434 ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com