ಜ್ಯೂಸ್‍ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ವೇಶ್ಯಾವಾಟಿಕೆ

ಮನೆ ಕೆಲಸದ ನೆಪವೊಡ್ಡಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿ ಕಿರುಕುಳ ನೀಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಇಲ್ಲಿನ ಹನುಮಂತ ನಗರದ ಮಹಿಳೆಯೊಬ್ಬರು..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಮನಗರ: ಮನೆ ಕೆಲಸದ ನೆಪವೊಡ್ಡಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿ ಕಿರುಕುಳ ನೀಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಇಲ್ಲಿನ ಹನುಮಂತ ನಗರದ ಮಹಿಳೆಯೊಬ್ಬರು ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳೊಂದಿಗೆ ಸೋಮವಾರ ಐಜೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪರಿತ್ಯಕ್ತ ಮಹಿಳೆಗೆ ಮೂರು ವರ್ಷದ ಹೆಣ್ಣು ಮಗುವಿದೆ. ತವರು ಮನೆ ಆಶ್ರಯದಲ್ಲಿರುವ ಇವರು ಜೀವನೋಪಾಯಕ್ಕೆ ನಗರದ ಎಪಿಎಂಸಿ ಮಾರುಕಟ್ಟೆ ಹಿಂಭಾಗವಿರುವ ಮನೆಯಲ್ಲಿ ಮನೆ ಕೆಲಸಕ್ಕೆ ಸೇರಿದ್ದರು. ಮೊದಲ 3 ತಿಂಗಳು ಚೆನ್ನಾಗಿಯೇ ನೋಡಿಕೊಂಡ ಮನೆ ಮಾಲೀಕರು ನಂತರ ಜ್ಯೂಸ್‍ನಲ್ಲಿ ಮತ್ತು ಬರುವ ಔಷಧಿ ಬೆರೆಸಿ, ಜ್ಞಾನ ತಪ್ಪಿದ ನಂತರ ವೇಶ್ಯಾವಾಟಿಕೆಗೆ ತೊಡಗಿಸಿದ್ದರೆಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

``ಬಲವಂತವಾಗಿ ನನ್ನನ್ನು ವೇಶ್ಯಾವಾಟಿಕೆಗೆ ದೂಡಿದ್ದಾರೆ. ಮತ್ತು ಬರಿಸುವ ಔಷಧಿ ನೀಡಿ ಪ್ರಜ್ಞೆ ತಪ್ಪಿಸುತ್ತಿದ್ದರು. ಪ್ರಜ್ಞೆ ಬಂದ ನಂತರ ನನ್ನ ಮೈಮೇಲೆ ಬಟ್ಟೆಯೇ ಇರುತ್ತಿರಲಿಲ್ಲ. ಅಲ್ಲದೆ ಸಿಗರೇಟಿನಿಂದ ಸುಟ್ಟ ಗಾಯಗಳಾಗಿರುತ್ತಿದ್ದವು. ಕಳೆದ ಒಂದೂವರೆ ವರ್ಷದಿಂದ ಮನೆ ಬಿಟ್ಟು ಹೊರ ಹೋಗದ ಹಾಗೆ ರೂಮಿನಲ್ಲಿ ಕೂಡಿ ಹಾಕಿದ್ದರು. ಇದುವರೆಗೆ ನನಗೆ ಸಂಬಳವನ್ನೇ ನೀಡಿಲ್ಲ, ಅಲ್ಲದೆ ನನ್ನ ಬಳಿಯಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದರ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ'' ಎಂದಿದ್ದಾರೆ.

``ಚನ್ನಪಟ್ಟಣದ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ನಾನು ಗರ್ಭಿಣಿ ಎಂದು ಗೊತ್ತಾಯಿತು. ಮಗುವನ್ನು ತೆಗೆಸಿ ಹಾಕುವಂತೆ ಒತ್ತಡ ಹಾಕುತ್ತಿದ್ದರು. ಇದೀಗ ನಾನು ಏಳು ತಿಂಗಳ ಗರ್ಭಿಣಿಯಾಗಿದ್ದೇನೆ'' ಎಂದು ಆಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com