ಮಕ್ಕಳ ದೌರ್ಜನ್ಯ ತಡೆಗೆ ವಿಶೇಷ ಕೋರ್ಟ್

ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ನಡೆದ ರಾಜ್ಯಮಟ್ಟ ದ ಮಕ್ಕಳ ಹಕ್ಕುಗಳ ಸಂಸತ್‍ನಲ್ಲಿ ಮಕ್ಕಳು ಕೇಳಿದ ಪ್ರಶ್ನೆಗೆ ಈ ರೀತಿ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ನಡೆದ ರಾಜ್ಯಮಟ್ಟ ದ ಮಕ್ಕಳ ಹಕ್ಕುಗಳ ಸಂಸತ್‍ನಲ್ಲಿ ಮಕ್ಕಳು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರ ರೂಪದ ಭರವಸೆ ನೀಡಿದ್ದಾರೆ.

ಮಕ್ಕಳು ಕೂಡ `ಸರ್... ಬಾಲ್ಯ ವಿವಾಹವನ್ನು ನಡೆಸುವ ಕುಟುಂಬಕ್ಕೆ ಸರ್ಕಾರದಿಂದ ಯಾವುದೇ ಸವಲತ್ತು ನೀಡಬೇಡಿ! ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಮಕ್ಕಳ ಹೆಸರು ಮತ್ತು ಶಾಲೆಗಳ ಹೆಸರನ್ನು ಗೌಪ್ಯವಾಗಿಡಲು ಸರ್ಕಾರ ಸೋತಿದೆ; ಅಂತಹ ಸುದ್ದಿ ಪ್ರಕಟಿಸಿದ ಮಾಧ್ಯಮದವರ ಮೇಲೆ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ದೇವದಾಸಿ ಪದಟಛಿತಿಯನ್ನು ತಡೆಗಟ್ಟಲು ನಿಮ್ಮ ಕೈಯಲ್ಲಿ ಆಗುವುದಿಲ್ಲವೆ?...' ಎಂದು ಮುಖ್ಯ-ಮಂತ್ರಿಯವರನ್ನು ನೇರವಾಗಿ ಪ್ರಶ್ನಿಸಿದರು.

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 80 ಮಕ್ಕಳ ಕಠಿಣ, ಗಂಭೀರ ಪ್ರಶ್ನೆಗಳಿಗೆ ಸುಮಾರು ಒಂದೂವರೆ ತಾಸುಗಳಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಉತ್ತರಿಸಿದರು. ಬಾಲ್ಯವಿವಾಹ ನಡೆಸುವವರಿಗೆ ಯಾವುದೇ ಸವಲತ್ತು ನೀಡಬೇಡಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಿಮ್ಮ ಸಲಹೆ ಚೆನ್ನಾಗಿದೆ. ಬಾಲ್ಯವಿವಾಹ ನಿಷೇಧ ಕಾಯಿದೆ ಜಾರಿಯಿದ್ದು ಸಿಕ್ಕಿ ಹಾಕಿಕೊಂಡವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ. ಕಾನೂನು ಉಲ್ಲಂಘಿಸಿದ ತಂದೆ- ತಾಯಿಯ ಮೇಲೆ ಕೇಸು ಹಾಕಲಾಗುತ್ತಿದೆ.

ಸಾಮೂಹಿಕ ವಿವಾಹ ನಡೆಸುವ ಸಂಘ ಸಂಸ್ಥೆಗಳು ಕಡ್ಡಾಯವಾಗಿ ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ತುಂಬಿದೆಯೇ ಎಂಬುದನ್ನು ಪರಿಶೀಲಿಸಿಯೇ ವಿವಾಹ ನಡೆಸುವಂತೆಯೂ ಸೂಚಿಸಲಾಗಿದೆ ಎಂದರು. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಕ್ಕಳ ಹೆಸರನ್ನು ಗೌಪ್ಯವಾಗಿಡಲು ನಿಮಗೇನು ಕಷ್ಟ ಎಂಬ ಪ್ರಶ್ನೆಗೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತೊಡೆದು ಹಾಕಲು ಪೋಸ್ಕೋ ಉತ್ತಮ ಕಾನೂನಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದರು.

ಸಚಿವೆ ಉಮಾಶ್ರೀ ದನಿಗೂಡಿಸಿ, ಕೆಲವು ಪ್ರಕರಣಗಳಲ್ಲಿ ಸಾಕ್ಷ್ಯ ನಾಶಪಡಿಸುತ್ತಿ ರುವುದರಿಂದ ಶಿಕ್ಷೆ ಯಾಗುತ್ತಿಲ್ಲ ಎಂಬ ನೋವು ನಮ್ಮಲ್ಲೂ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು. ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ನಿಮ್ಮ ಸರ್ಕಾರದ ನಿಲುವೇನು ಎಂಬ ಪ್ರಶ್ನೆ ಎದುರಾದಾಗ, ತಡೆಯಲು ಕಾನೂನಿದ್ದರೂ ಇದಕ್ಕೆ ಆಯಾ ಕುಟುಂಬದವರ ಸಹಕಾರ ಬೇಕು. ಕೆಲವರು ಗೊತ್ತಿದ್ದೂ ತಪ್ಪು ಮಾಡುತ್ತಾರೆ. ಭ್ರೂಣ ಹತ್ಯೆಯ ಮಾಹಿತಿ ಸಿಕ್ಕರೆ ನಮಗೆ ತಿಳಿಸಿ ಎಂದು ಸೂಚಿಸಿದರು.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಅನಾಥ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವಿಕೆ ಸೇರಿದಂತೆ ಅನೇಕ ಪ್ರಶ್ನೆಗಳು ಎದುರಾದವು. ಯೂನಿಸೆಫ್ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಘಟಕದ ಮುಖ್ಯಸ್ಥೆ ರೂತ್ ಲಿಯಾನೊ, ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ ಅಧ್ಯಕ್ಷ ಆರ್.ವಿ.ವೆಂಕಟೇಶ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಸಂಚಾಲಕ ವಾಸುದೇವ ಶರ್ಮಾ, ಮಾಜಿ ನೊಂದು ನುಡಿದ ವಿದ್ಯಾರ್ಥಿ ಆನೇಕಲ್ ಗ್ರಾಮದ ಶ್ರೀಕಾಂತ್ ಎಂಬ ಅಂಗವಿಕಲ ವಿದ್ಯಾರ್ಥಿಯು ತನಗೆ ಆರ್‍ಟಿಇ ಅಡಿ ಸೀಟು ಕೊಡುತ್ತಿಲ್ಲ.

ಈಗ ಓದುತ್ತಿರುವ ಶಾಲೆಯಲ್ಲಿ ಶೌಚಾಲಯಕ್ಕೆ ಹೋಗಲು ರ್ಯಾಂಪ್ ಇಲ್ಲ. ನಾವು ಮನುಷ್ಯರಲ್ಲವಾ? ಎಂದು ಒಂದೇ ಸಮನೆ ಎರಗಿದ. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಸರ್ಕಾರಿ ಕಟ್ಟಡ, ಎಲ್ಲ ಶಾಲೆಗಳಲ್ಲೂ ಅಂಗವಿಕಲರಿಗಾಗಿ ರ್ಯಾಂಪ್ ನಿರ್ಮಿಸುವಂತೆ ನೋಡಿಕೊಳ್ಳಲಾಗುವುದು. ಅಂಧ ಮಕ್ಕಳಿಗೆ ಬ್ರೈಲ್ ಲಿಪಿ ಸ್ಲೇಟ್ ಬದಲು ಟಾಕಿಂಗ್ ಲ್ಯಾಪ್‍ಟಾಪ್ ನೀಡಲಾಗುವುದು ಎಂದರು.

ಸ್ವಾತಿ ಎಂಬ ವಿದ್ಯಾರ್ಥಿನಿ, ತಮ್ಮ ಶಾಲೆಯಲ್ಲಿ ಐದು ಮಂದಿ ಶಾಲೆಬಿಟ್ಟು ಗ್ಯಾರೇಜ್‍ಗೆ ಹೋಗುತ್ತಿದ್ದಾರೆ. ಅವರನ್ನು ಶಾಲೆಗೆ ಕರೆತನ್ನಿ ಎಂದಳು. ಆಗ ಸಿಎಂ, ದೂರು ಕೊಡಮ್ಮ ಬಿಇಒಗೆ ಸೂಚಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com