ಮಾಸಾಶನ, ಪರಿಹಾರ ಹೆಚ್ಚಳಕ್ಕೆ ಎಂಡೋ ಸಂತ್ರಸ್ತರ ಧರಣಿ

18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಂಡೋ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಎಂಡೋ ಸಲ್ಫಾನ್ ಸಂತ್ರಸ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ,,,
ಎಂಡೋ ಸಲ್ಫಾನ್ ಪೀಡಿತ ಮಕ್ಕಳಿ (ಸಾಂದರ್ಭಿಕ ಚಿತ್ರ )
ಎಂಡೋ ಸಲ್ಫಾನ್ ಪೀಡಿತ ಮಕ್ಕಳಿ (ಸಾಂದರ್ಭಿಕ ಚಿತ್ರ )

ಬೆಂಗಳೂರು:ಎಂಡೋಸಲ್ಫಾನ್ ಪೀಡಿತರಿಗೆ ತಲಾ ರು.10 ಲಕ್ಷ ಪರಿಹಾರ, ಮಾಸಾಶನ ರು.5 ಸಾವಿರಕ್ಕೆ ಹೆಚ್ಚಳ ಸೇರಿದಂತೆ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಂಡೋ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಎಂಡೋ ಸಲ್ಫಾನ್ ಸಂತ್ರಸ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರ ದ ಗಮನ ಸೆಳೆದರು.

ಸಿನೆಮಾ ನಟ-ನಟಿಯರು, ವಿವಿಧ ಪಕ್ಷಗಳ ರಾಜಕೀಯ ನಾಯಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗುವ ಮೂಲಕ ಸಂತ್ರಸ್ತರಿಗೆ ಬೆಂಬಲ ಸೂಚಿಸಿದರು.

ಎಂಡೋ-ಸಲ್ಫಾನ್ ಸಂತ್ರಸ್ತರಿಗೆ ಸೂಕ್ತ ಮಾಸಾಶನ, ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್ ಆದೇಶಿಸಿದ್ದರೂ ಇದುವರೆಗೂ ಅನುಷ್ಠಾನವಾಗಿಲ್ಲ. ಕಳೆದ ಆರು ತಿಂಗಳಿಂದ ಮಾಸಿಕ ಪಿಂಚಣಿ ಸ್ಥಗಿತಗೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೇರಳ ಸಂತ್ರಸ್ತರಿಗೆ ರು.5 ಲಕ್ಷ ಪರಿಹಾರ, ರು.5 ಸಾವಿರ ಮಾಸಾಶನ, ನೀಡುತ್ತಿದೆ. ರಾಜ್ಯದಲ್ಲೂ ಇದನ್ನು ಜಾರಿ ಮಾಡಿ ಎಂದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com