ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ ರಾವ್ (ಸಂಗ್ರಹ ಚಿತ್ರ)
ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ ರಾವ್ (ಸಂಗ್ರಹ ಚಿತ್ರ)

ಲೋಕಾಯುಕ್ತರಿಗಾಗಿ ಕಾಯುತ್ತಿವೆ ಅರ್ಜಿಗಳು

ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಪುತ್ರನ ಬಂಧನ ವಾಗುತ್ತಿದ್ದಂತೆ ಸುದೀರ್ಘ ರಜೆಯಲ್ಲಿರುವ ನ್ಯಾ.ವೈ.ಭಾಸ್ಕರ್‍ರಾವ್ ಅವರಿಂದಾಗಿ ಸಾವಿರಾರು..

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಪುತ್ರನ ಬಂಧನ ವಾಗುತ್ತಿದ್ದಂತೆ ಸುದೀರ್ಘ ರಜೆಯಲ್ಲಿರುವ ನ್ಯಾ.ವೈ.ಭಾಸ್ಕರ್‍ರಾವ್ ಅವರಿಂದಾಗಿ  ಸಾವಿರಾರು ಪ್ರಕರಣಗಳು ವಿಲೇವಾರಿಯಾಗದೆ ಲೋಕಾಯುಕ್ತದಲ್ಲಿ ಕೊಳೆಯುತ್ತಿವೆ.

ವಿಶೇಷ ತನಿಖಾ ತಂಡದ ಅಧಿಕಾರಿಗಳು ಕಳೆದ ಜುಲೈನಲ್ಲಿ ಅಶ್ವಿನ್ ರಾವ್‍ನನ್ನು ಬಂಧಿಸುತ್ತಿದ್ದಂತೆ ಭಾಸ್ಕರ್‍ರಾವ್ ಅವರು ರಜೆಯನ್ನು ವಿಸ್ತರಿಸುತ್ತಾ ಬಂದಿದ್ದು ಬಹುತೇಕ ನಾಲ್ಕು ತಿಂಗಳು  ಕಳೆದಿವೆ. ಅಕ್ಟೋಬರ್ 22ರಿಂದ 45 ದಿನಗಳ ಕಾಲ ಭಾಸ್ಕರ್‍ರಾವ್ ಅವರು 4ನೇ ಬಾರಿಗೆ ರಜೆ ವಿಸ್ತರಿಸಿಕೊಂಡಿದ್ದಾರೆ. ವಿವಿಧ ಸಂಘಟನೆ ಗಳು, ರಾಜಕೀಯ ಪಕ್ಷಗಳು, ಮುಖಂಡರು,  ಸಾರ್ವಜನಿಕರು, ವಕೀಲರು ಹೀಗೆ ಸಮಾಜದ ಎಲ್ಲ ಸಮುದಾಯಗಳು ರಾಜಿನಾಮೆಗೆ ಆಗ್ರಹಿಸಿ ಹೋರಾಟ ನಡೆಸಿವೆ. ಆದರೆ, ಇದ್ಯಾವುದಕ್ಕೂ ಬಗ್ಗದ ಭಾಸ್ಕರ್‍ರಾವ್, ತಮ್ಮ ಕುರ್ಚಿಗೆ  ಅಂಟಿಕೊಂಡೆ ಕುಳಿತಿದ್ದಾರೆ.

ಈಗಾಗಲೇ ಉಪಲೋಕಾಯುಕ್ತರ ಒಂದು ಹುದ್ದೆ ಖಾಲಿಯಿದ್ದು ಕೇವಲ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಐಎಎಸ್, ಐಪಿಎಸ್ ದರ್ಜೆಯ ಉನ್ನತ ಅಧಿಕಾರಿಗಳ ವಿರುದ್ಧದ  ಪ್ರಕರಣಗಳ ವಿಚಾರಣೆ ಅಧಿಕಾರವನ್ನು ಲೋಕಾಯುಕ್ತರು ಮಾತ್ರ ಹೊಂದಿದ್ದು, ಉಪ ಲೋಕಾಯುಕ್ತರಿಗೆ ಇಲ್ಲ. ಲೋಕಾಯುಕ್ತರ ವ್ಯಾಪ್ತಿಗೆ ಬರುವಂತಹ ಪ್ರಕರಣಗಳೇ ನೂರಾರು ಇದ್ದು  ವಿಲೇವಾರಿಗೆ ಬಾಕಿ ಉಳಿದುಕೊಂಡಿವೆ. ಉಳಿದಂತೆ ಸಾವಿರಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಲೋಕಾಯುಕ್ತರಿಂದ ಪರಿಶೀಲನೆಗೆ ಒಳಪಡಬೇಕಿರುವ ಹಾಗೂ ಅವರು ಕೈಗೊಳ್ಳುವ ನಿರ್ಧಾರಗಳು  ಅತಿ ಮುಖ್ಯ. ಆದರೆ, ಲೋಕಾಯುಕ್ತರಿಲ್ಲದೇ ಈ ಎಲ್ಲ ಪ್ರಕರಣಗಳು ವಿಲೇವಾರಿಯಾಗದೆ ಉಳಿದುಕೊಂಡಿದ್ದು ಭ್ರಷ್ಟ ಸರ್ಕಾರಿ ಅಧಿಕಾರಿ ಗಳು ಹಾಗೂ ಸಿಬ್ಬಂದಿಗೆ ಭಯವಿಲ್ಲದಂತಾಗಿದೆ.

ತಹಸೀಲ್ದಾರ್ ಕಚೇರಿಗಳು, ಮಕ್ಕಳ ಹಾಸ್ಟೆಲ್‍ಗಳು, ಆಸ್ಪತ್ರೆಗಳು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟರ ಹಾವಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಮುಖ್ಯಸ್ಥನಿಲ್ಲದ ಲೋಕಾಯುಕ್ತ ಸಂಸ್ಥೆ ಹಲ್ಲಿಲ್ಲದ ಹಾವಿನಂತಾಗಿದ್ದು ಪೂರ್ಣ ಪ್ರಮಾಣದ ಪ್ರಾಮಾಣಿಕ ಲೋಕಾಯುಕ್ತರು ಹಾಗೂ ಖಾಲಿ ಇರುವ ಉಪ ಲೋಕಾಯುಕ್ತರಿಗಾಗಿ ಸಾರ್ವಜನಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸದ್ಯ ವಿಧಾನಸಭೆ ಅಧಿವೇಶನ ನಡೆಯುತ್ತಿರುವುದರಿಂದ ಸರ್ಕಾರ ಹಾಗೂ ಸರ್ವಪಕ್ಷ-ಗಳು ಸೇರಿ ಕಳಂಕಿತ ಲೋಕಾಯುಕ್ತರನ್ನು ಕಾನೂನು ಪ್ರಕ್ರಿಯೆಗಳ ಮೂಲಕ ಕಿತ್ತು ಹಾಕಲು ಪ್ರಕ್ರಿಯೆ  ಆರಂಭಿಸಿದ್ದು ಅಂತಿಮವಾಗಿ ಏನಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com