ಪಾತಕಿಗಳ ಬೆದರಿಕೆ ಕರೆ ಬಗ್ಗೆ ನಿರ್ಲಕ್ಷ್ಯ ಇಲ್ಲ

ಭಾರತೀಯ ಮೂಲದ ಭೂಗತ ಪಾತಕಿಗಳು ರಾಜ್ಯದ ಸಚಿವರು ಪ್ರತಿ-ಷ್ಠಿತ ವ್ಯಕ್ತಿಗಳಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ...
ಗೃಹಸಚಿವ ಜಿ.ಪರಮೇಶ್ವರ (ಸಂಗ್ರಹ ಚಿತ್ರ)
ಗೃಹಸಚಿವ ಜಿ.ಪರಮೇಶ್ವರ (ಸಂಗ್ರಹ ಚಿತ್ರ)

ವಿಧಾನ ಪರಿಷತ್: ಭಾರತೀಯ ಮೂಲದ ಭೂಗತ ಪಾತಕಿಗಳು ರಾಜ್ಯದ ಸಚಿವರು ಪ್ರತಿ-ಷ್ಠಿತ ವ್ಯಕ್ತಿಗಳಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಸಚಿವರಿಗೂ ಕರೆ ಮಾಡಿ ಬೆದರಿಕೆ ಹಾಕುತ್ತಾರೆಂದರೆ ಅವರ ಉದ್ದೇಶವೇ ಬೇರೆಯಾಗಿರುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಐವಾನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬನ್ನಂಜೆ ರಾಜಾನನ್ನು ಹಿಡಿದಿರುವ ಪೊಲೀಸರನ್ನು ಅಭಿನಂದಿಸಲೇಬೇಕು. ಅದೇ ರೀತಿ ರವಿ ಪೂಜಾರಿ  ವಿರುದ್ಧವೂ ಸಾಕಷ್ಟು ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು. ರವಿ ಪೂಜಾರಿ ವಿರುದ್ಧ ರಾಜ್ಯದಲ್ಲಿ ಒಟ್ಟು 61 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಈತನು ಇಂಟರ್‍ನೆಟ್ ಕಾಲ್ ಮುಖೇನ ಸಂಪರ್ಕಿಸಿ ಬೆದರಿಕೆ ಹಾಕಿರುವ ಐದು ಪ್ರಕರಣಗಳು ದಾಖಲಾಗಿವೆ ಎಂದರು. ಅದೇ ರೀತಿ ಭೂಗತ ಪಾತಕಿ ಬನ್ನಂಜೆ ರಾಜನ ವಿರುದ್ಧ ರಾಜ್ಯದಲ್ಲಿ 60 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. 39  ಪ್ರಕರಣಗಳಲ್ಲಿ ಈತನನ್ನು ಕರ್ನಾಟಕ ಪೊಲೀಸರು ಮೊರಾಕೋ ಸರ್ಕಾರದಿಂದ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈತನನ್ನು ಶಿವಮೊಗ್ಗ, ಉತ್ತರ ಕನ್ನಡ ಮತ್ತು ಉಡುಪಿ ಪೊಲೀಸರು  ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದರು.

ಪ್ರಚೋದನಕಾರಿ ಭಾಷಣ ಸಹಿಸಲ್ಲ: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ವ್ಯಕ್ತಿಗಳ ವಿರುದ್ಧ 28 ಪ್ರಕರಣ ದಾಖಲಾಗಿವೆ. ಈ ಪೈಕಿ 22 ಪ್ರಕರಣ ದಕ್ಷಿಣ  ಕನ್ನಡದಲ್ಲಿಯೇ ದಾಖಲಾಗಿವೆ ಎಂದು ಗೃಹ ಸಚಿವರು ಸಭೆಗೆ ಮಾಹಿತಿ ನೀಡಿದರು. ಕರಾವಳಿ ಭಾಗದಲ್ಲಿ ಪ್ರಚೋದನಕಾರಿ ಭಾಷಣಗಳಿಂದಲೇ ಗಲಭೆ ಆಗುತ್ತಿದೆ, ಕೊಲೆಗಳಾಗುತ್ತಿವೆ. ಈ  ವಿಚಾರದಲ್ಲಿ ಸರ್ಕಾರ ಯಾವುದೇ ರೀತಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com