ಗೆಳತಿಯೊಂದಿಗೆ ಕುಳಿತಿದ್ದವನ ಕೊಲೆ

ಜ್ಞಾನಭಾರತಿ ಸಮೀಪದ ಮುತ್ತುರಾಯ ದೇವಸ್ಥಾನದ ಹತ್ತಿರುವಿರುವ ರೈಲ್ವೆ ಹಳಿ ಬಳಿ ಸೋಮವಾರ ಕ್ಯಾಬ್ ಚಾಲಕನೊಬ್ಬರ ಶವ ಪತ್ತೆಯಾಗಿದೆ...
ಅಪರಾಧ
ಅಪರಾಧ
Updated on

ಬೆಂಗಳೂರು: ಜ್ಞಾನಭಾರತಿ ಸಮೀಪದ ಮುತ್ತುರಾಯ ದೇವಸ್ಥಾನದ ಹತ್ತಿರುವಿರುವ ರೈಲ್ವೆ ಹಳಿ ಬಳಿ ಸೋಮವಾರ ಕ್ಯಾಬ್ ಚಾಲಕನೊಬ್ಬರ ಶವ ಪತ್ತೆಯಾಗಿದೆ.

ಕೆಂಗೇರಿ ಸಮೀಪದ ಪಂಚಶೀಲ ಲೇಔಟ್ ನಿವಾಸಿ ದೇವರಾಜ್ (21) ಮೃತರು. ರೈಲ್ವೆ ಹಳಿಗಳ ಬಳಿ ಅಪರಿಚಿತ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಸಿಬ್ಬಂದಿ ಪರಿಶೀಲಿಸಿದಾಗ ಮೃತದೇಹದ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾನುವಾರ ಸಂಜೆ ದೇವರಾಜ್, ತಮ್ಮ ಗೆಳತಿ ರೂಪಾ ಜತೆ ಜ್ಞಾನಭಾರತಿ ಆವರಣಕ್ಕೆ ವಾಯುವಿಹಾರಕ್ಕೆ ಬಂದಿದ್ದರು. ಸ್ವಲ್ಪ ಕತ್ತಲಾದ ನಂತರವೂ ಅಲ್ಲಿ ಕುಳಿತಿದ್ದಾಗ ಯಾರೋ ಅಪರಿಚಿತ ದುಷ್ಕರ್ಮಿಗಳು ಬಂದು ಹಿಂದಿನಿಂದ ಇಬ್ಬರ ತಲೆಗೂ ಹಲ್ಲೆ ನಡೆಸಿದರು. ತಡವಾಗಿ ಎಚ್ಚರಗೊಂಡ ನಾನು ಕತ್ತಲೆಯಾಗಿದ್ದ ಕಾರಣ ಅಲ್ಲಿಂದ ಹೊರಟುಹೋದೆ. ಆದರೆ, ಬೆಳಗ್ಗೆ ರೈಲ್ವೆ ಹಳಿಗಳ ಬಳಿ ಶವ ಪತ್ತೆಯಾಗಿರುವ ವಿಷಯ ಗೊತ್ತಾಗಿದೆ ಎಂದು ರೂಪಾ ತಿಳಿಸಿದ್ದಾರೆ. ರೂಪಾ ಹಾಗೂ ದೇವರಾಜ್ ಸುಮಾರು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಕಾರಣಕ್ಕಾಗಿಯೆ ದೇವರಾಜ್‍ನ ಕೊಲೆ ಯಾಗಿರಬಹುದು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com