ಹೈಕೋರ್ಟ್ ಕಾರ್ಯ ಶ್ಲಾಘನೀಯ

ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಲ್ಲಿ ಕರ್ನಾಟಕ ಹೈಕೋರ್ಟ್ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಉಪಲೋಕಾಯುಕ್ತ...
ಲೋಕಾಯುಕ್ತ
ಲೋಕಾಯುಕ್ತ

ಬೆಂಗಳೂರು: ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಲ್ಲಿ ಕರ್ನಾಟಕ ಹೈಕೋರ್ಟ್ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಉಪಲೋಕಾಯುಕ್ತ ಸುಭಾಷ್ ಬಿ ಅಡಿ ಹೇಳಿದ್ದಾರೆ.

ಸೋಮವಾರ ವಕೀಲರ ಸಂಘ ಬೆಂಗಳೂರು ಹೈಕೋರ್ಟ್‍ನ ವಕೀಲರ ಸಭಾಂಗಣದಲ್ಲಿ ವಕೀಲ ಪಿ.ಶಿವಣ್ಣ ಬರೆದಿರುವ 'ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಅದರ ಇತಿಹಾಸ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಲ್ಲಿಯವರೆಗೂ ಅನುಭವಿಸಿರುವ ಹುದ್ದೆ ಮತ್ತು ಅಧಿಕಾರಗಳಿಗಿಂತಲೂ ನನಗೆ ವಕೀಲಿ ವೃತ್ತಿ ಹೆಚ್ಚು ಇಷ್ಟ. ವಕೀಲಿ ವೃತ್ತಿಗೆ ಎಲ್ಲವನ್ನೂ ನೀಡಿದ ಸಂತೃಪ್ತಿ ನನಗಿದೆ ಎಂದು ತಿಳಿಸಿದರು.

ಕರ್ನಾಟಕ ಹೈಕೋರ್ಟ್‍ಗೆ ಒಳ್ಳೆಯ ಇತಿಹಾಸವಿದ್ದು, ಇಲ್ಲಿ ಹಲವಾರು ಉತ್ತಮ ಆದೇಶಗಳು ಹೊರಬಿದ್ದಿವೆ ಎಂದು ತಿಳಿಸಿದರು. ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ರಾಮಾ ಜೋಯಿಸ್ ಪುಸ್ತಕ ಬಿಡುಗಡೆ ಮಾಡಿದರು.ವಕೀಲರ ಸಂಘದ ಅಧ್ಯಕ್ಷ ಎಚ್ .ಸಿ.ಶಿವರಾಮು, ಕಾರ್ಯದರ್ಶಿ ಪುಟ್ಟೇಗೌಡ, ಖಜಾಂಚಿ ಎಚ್.ವಿ.ಸತ್ಯನಾರಾಯಣ ಗೌಡ, ಜಂಟಿ ಕಾರ್ಯದರ್ಶಿ ಸಂಧ್ಯಾ ಯು ಪ್ರಭು, ಗ್ರಂಥಾಲಯ ಸಮಿತಿ ಅಧ್ಯಕ್ಷ ಬಿ.ಬಾಲಕೃಷ್ಣ ಹಾಗೂ ಲಾಯರ್ಸ್ ಲಾ ಬುಕ್ ಪ್ರಕಾಶಕ ಜಿ.ವಿ.ಮೂರ್ತಿ ಭಾಗವಹಿಸಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com