ಶಾಲೆಗಳಲ್ಲಿ ತಿಂಗಳ ಸ್ವಚ್ಛತಾ ಅಭಿಯಾನ

ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆ ಮತ್ತು ಇಲಾಖೆ ಕಚೇರಿಗಳಲ್ಲಿ ಅ. 2ರಿಂದ 31ರವರೆಗೆ ಸ್ವಚ್ಛತಾ ಆಂದೋಲನ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆ ಮತ್ತು ಇಲಾಖೆ ಕಚೇರಿಗಳಲ್ಲಿ ಅ. 2ರಿಂದ 31ರವರೆಗೆ ಸ್ವಚ್ಛತಾ ಆಂದೋಲನ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.

ಸ್ವಚ್ಛತಾ ಕಾರ್ಯಕ್ರಮದ ಕುರಿತಾಗಿ ಇಲಾಖೆಯ ಪ್ರಧಾನ ಕಾರ್ಯ ದರ್ಶಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದು ತಿಂಗಳು ಪೂರ್ತಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲು
ನಿರ್ಧರಿಸಲಾಯಿತು. ಸ್ವಚ್ಛತಾ ಆಂದೋಲದಡಿಯಲ್ಲಿನ ರೂಪುರೇಷೆಗಳನ್ನು ಆಯಾ ಕಚೇರಿ ಮುಖ್ಯಸ್ಥರು ತೀರ್ಮಾನಿಸಿಕೊಂಡು ಆಂದೋಲನದ ದಿನಗಳಲ್ಲಿ ಗರಿಷ್ಠ ಮಟ್ಟದ ಫಲಿತಾಂಶ ಹೊಂದಬೇಕೆಂದು ಸೂಚಿಸಲಾಗಿದೆ. ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಇಲಾಖೆಯ ಆಯುಕ್ತ ಸತ್ಯಮೂತಿರ್  ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com